alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕಾಗೆ ರಿಂಗ್‌ ಖರೀದಿಸಲು ಜುವೆಲರಿ ಶಾಪ್‌ ಬಂದ್ ಮಾಡಿಸಿದ್ದನಂತೆ ಭಾವೀ ಪತಿ…!

ನಿಶ್ಚಿತಾರ್ಥದ ರಿಂಗ್‌ ಖರೀದಿಸಲು ನಿಕ್‌, ಟಿಫನಿ ಸ್ಟೋರ್‌ಗೆ ಹೋಗಿದ್ದರು. ಈ ವೇಳೆ ತಾವು ಒಳಗಿದ್ದು, ಬೇರೆ ಯಾರನ್ನೂ ಒಳ ಬಾರದಂತೆ ನೋಡಿಕೊಳ್ಳಲು, ಶಾಪನ್ನು ಕೆಲ ಹೊತ್ತಿಗೆ ಕ್ಲೋಸ್‌ ಮಾಡಿಸಿದ್ದಾರೆ ಎಂದು ಸುದ್ದಿಯಾಗಿದೆ. ಈ ವಿಚಾರವನ್ನು ಖಾಸಗಿ ಸುದ್ದಿ ಸಂಸ್ಥೆಯೊಂದು ಬಯಲು ಮಾಡಿದೆ.

ಅಷ್ಟು ಮಾತ್ರ ಅಲ್ಲ, ಲಂಡನ್‌ ನಲ್ಲಿ ಪ್ರಿಯಾಂಕ ಹಾಗೂ ನಿಕ್‌ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಿಯಾಂಕಾ ತಮ್ಮ 36 ನೇ ಹುಟ್ಟು ಹಬ್ಬ ಆಚರಿಸುವ ವೇಳೆ ನಿಕ್‌, ಬಾಲಿವುಡ್‌ ಬೆಡಗಿಗೆ ಉಂಗುರ ತೊಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಮೆರಿಕಾದ ಗಾಯಕ, ಕೆಲ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು, ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತನ್ನ ಸಹೋದರನ ಜತೆಗಿರುವ ಫೋಟೋಗಳನ್ನೂ ಹಾಕಿದ್ದಾರೆ ಎಂದು ಅಮೆರಿಕದ ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಾರ್ಯಕ್ರಮದ ಸಲುವಾಗಿಯೇ ನಿಕ್‌ ಹಾಗೂ ಪ್ರಿಯಾಂಕಾ ಜೋಡಿ ರಿಂಗ್‌ ಖರೀದಿಸಲು ಜುವೆಲರಿ ಶಾಪ್‌ ನಲ್ಲೂ ಕಾಣಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಿಯಾಂಕ ಹಾಗೂ ನಿಕ್‌ ಜೋನಾಸ್ ಲಂಡನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ. ಈ ವಿಚಾರವನ್ನು ಪ್ರಿಯಾಂಕ ಇನ್ನೂ ಅಧಿಕೃತಗೊಳಿಸಿಲ್ಲ.
2017 ರಲ್ಲಿ ಅಮೆರಿಕಾದಲ್ಲಿ ಮೊದಲ ಬಾರಿಗೆ ನಿಕ್‌ ಅವರನ್ನು ಭೇಟಿಯಾದ ಪ್ರಿಯಾಂಕ, ಈ ವರ್ಷದ ಕೊನೆಯಲ್ಲಿ ನಿಕ್‌ ಜೋನಾಸ್ ಜೊತೆ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...