alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾದಲ್ಲಿ ಮದುವೆ ನೋಂದಣಿಗೆ ಅರ್ಜಿ ಸಲ್ಲಿಸಿದ ನಿಕ್-ಪ್ರಿಯಾಂಕ

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಹಾಗೂ ಹಾಡುಗಾರ ನಿಕ್ ಜೋನಸ್ ಭಾರತದಲ್ಲಿ ಮದುವೆಯಾಗಲಿದ್ದಾರೆ. ಇಬ್ಬರು ಅಮೆರಿಕಾದಲ್ಲಿ ಮದುವೆಗೆ ಕಾನೂನು ಮಾನ್ಯತೆ ಪಡೆಯಲು ಮುಂದಾಗಿದ್ದಾರೆ. ಈ ಸಂಬಂಧ ಮದುವೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ವರದಿ ಪ್ರಕಾರ ಕೆಲ ದಿನಗಳ ಹಿಂದೆ ಪ್ರಿಯಾಂಕ ಹಾಗೂ ನಿಕ್ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ ಕೋರ್ಟ್ಹೌಸ್ ನ ಮುಂದೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಮದುವೆ ರಿಜಿಸ್ಟ್ರೇಶನ್ ಗೆ ಇಲ್ಲಿಗೆ ಬಂದಿದ್ದರು. ಅರ್ಜಿ ಭರ್ತಿ ಮಾಡಿದ್ದಾರೆ ಎನ್ನಲಾಗ್ತಿದೆ. ಡಿಸೆಂಬರ್ 2 ರಂದು ಜೋದ್ಪುರದಲ್ಲಿ ನಿಕ್-ಪ್ರಿಯಾಂಕ ಮದುವೆ ನೆರವೇರಲಿದೆ.

ಭಾರತದಲ್ಲಿ ಮದುವೆಯಾದ್ಮೇಲೆ ಅಮೆರಿಕಾದಲ್ಲಿಯೂ ಕಾನೂನು ದಾಖಲೆ ಪಡೆಯಲು ಜೋಡಿ ಬಯಸಿದೆ. ಮದುವೆ ತಯಾರಿಯಲ್ಲಿ ಜೋಡಿ ಬ್ಯುಸಿಯಾಗಿದ್ದಾರೆ. ನವೆಂಬರ್ 30 ರಿಂದ ಮದುವೆ ಕಾರ್ಯಕ್ರಮ ಶುರುವಾಗಲಿದೆ. ಆಗಸ್ಟ್ 18 ರಂದು ಜೋಡಿ ಉಂಗುರ ಬದಲಿಸಿಕೊಂಡಿದ್ದರು.

ನಿಶ್ಚಿತಾರ್ಥದ ನಂತ್ರ ಪ್ರಿಯಾಂಕ ಪಾರ್ಟಿಯಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪ್ರಿಯಾಂಕ ಬ್ಯಾಚ್ಯುಲರ್ ಪಾರ್ಟಿ ಮಾಡಿದ್ದು, ಅದ್ರ ಫೋಟೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...