alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ನಂತ್ರ ಅಮೆರಿಕಾಕ್ಕಲ್ಲ ಬ್ರೆಜಿಲ್ ಗೆ ತೆರಳಿದ್ದಾರೆ ಪ್ರಿಯಾಂಕಾ–ನಿಕ್

ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಸುದ್ದಿಯಲ್ಲಿದ್ದಾರೆ. ಅಮ್ಮನನ್ನು ಭೇಟಿ ಮಾಡಿಸಲು ಬಾಯ್ ಫ್ರೆಂಡ್ ನಿಕ್ ಜೋನಸ್ ರನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದ ಪಿಗ್ಗಿ ಗೋವಾ ಟ್ರಿಪ್ ಮುಗಿಸಿದ್ದಳು. ಜೊತೆಗೆ ಮುಕೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಇಬ್ಬರೂ ಮಿಂಚಿದ್ದರು.

ಶುಕ್ರವಾರವೇ ಪ್ರಿಯಾಂಕಾ ಹಾಗೂ ನಿಕ್ ಮುಂಬೈ ಬಿಟ್ಟಿದ್ದಾರೆ. ಆದ್ರೆ ಈ ಜೋಡಿ ಅಮೆರಿಕಾಕ್ಕೆ ವಾಪಸ್ ಹೋಗಲಿಲ್ಲ. ನಿಕ್ ಹಾಗೂ ಪ್ರಿಯಾಂಕಾ ಬ್ರೆಜಿಲ್ ಗೆ ತೆರಳಿದ್ದಾರೆ. ಇಂದು ಮತ್ತು ನಾಳೆ ನಿಕ್ ಜೋನಸ್ ಸಂಗೀತ ಕಾರ್ಯಕ್ರಮ ಬ್ರೆಜಿಲ್ ನಲ್ಲಿ ನಡೆಯಲಿದೆ. ಇದಕ್ಕೆ ಪ್ರಿಯಾಂಕಾ ಸಾಥ್ ನೀಡಲಿದ್ದಾಳೆ.

ಪ್ರಿಯಾಂಕಾ, ನಿಕ್ ಗಿಂತ 10 ವರ್ಷ ದೊಡ್ಡವಳು. ಸಂಬಂಧ ಮುಂದುವರೆಸಲು ಇಬ್ಬರೂ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜುಲೈ ಅಥವಾ ಆಗಸ್ಟ್ ನಲ್ಲಿ ಎಂಗೇಜ್ಮೆಂಟ್ ನಡೆಯುವ ಸಾಧ್ಯತೆಯಿದೆ. ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ನಿಕ್ ಮದುವೆ ಪ್ರಪೋಸಲ್ ನೀಡಿದ್ದಾನೆ. ಪ್ರಿಯಾಂಕ ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಕಾಶ್ ಅಂಬಾನಿ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಪತಿ-ಪತ್ನಿಯಂತೆ ಕಾಣಿಸಿಕೊಂಡು ಇಬ್ಬರೂ ಗಮನ ಸೆಳೆದಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...