alex Certify
ಕನ್ನಡ ದುನಿಯಾ       Mobile App
       

Kannada Duniya

ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಕಳೆದುಕೊಂಡಿದ್ದಾರೆ ಶಾರುಕ್, ಸಲ್ಮಾನ್

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಶಾರುಕ್, ಸಲ್ಮಾನ್, ಅಮೀರ್, ಪ್ರಿಯಾಂಕ ಚೋಪ್ರಾ, ಬಿಗ್ ಬಿ ಅಮಿತಾಬ್ ಸೇರಿದಂತೆ ಅನೇಕರು ಲಕ್ಷಕ್ಕೂ ಹೆಚ್ಚು ಟ್ವಿಟ್ಟರ್ ಫಾಲೋವರ್ಸ್ ಗಳನ್ನ ಕಳೆದುಕೊಂಡಿದ್ದಾರೆ.

ಹಾಗಂತ ಇದು ಅಭಿಮಾನಿಗಳ ಕೋಪ ಅಥವಾ ಟ್ವಿಟ್ಟರ್ ಫಾಲೋವರ್ಸ್ ಸ್ಟಾರ್ ಗಳ ಮೇಲೆ ಮುಸಿನಿಕೊಂಡಿದ್ದಾರೆ ಅನ್ನೋ ಅರ್ಥವಲ್ಲ. ಅಥವಾ ಡಿಲೀಟ್ ಆಗಿರೋದು ಫೇಕ್ ಅಕೌಂಟ್ ಗಳಲ್ಲ. ಟ್ವಿಟ್ಟರ್ ಖಾತೆಯನ್ನು ತೆರೆದು ಬಹುದಿನಗಳಿಂದ ಉಪಯೋಗಿಸದೆ ಇರುವಂತಾ ಖಾತೆಗಳಾಗಿವೆ. ಹಾಗಾಗಿ ಟ್ವಿಟ್ಟರ್ ನ ಸಿಬ್ಬಂದಿಯಿಂದಲೇ ನಡೆದಿರುವ ಲಾಕ್ ಆಗಿರುವ ಅಕೌಂಟ್ ಗಳನ್ನ ಡಿಲೀಟ್ ಮಾಡುತ್ತಿರುವ ಪ್ರಕ್ರಿಯೆ ಇದಾಗಿದೆ. ಹಾಗಾಗಿಯೇ ಖ್ಯಾತನಾಮರ ಲಕ್ಷಾಂತರ ಸಂಖ್ಯೆಯ ಫಾಲೋವರ್ಸ್ ಗಳು ಕಡಿಮೆಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು 2 ಲಕ್ಷ ಇಪ್ಪತ್ತೇಳು ಸಾವಿರ ಫಾಲೋವರ್ಸ್ ಗಳನ್ನು ಕಳೆದುಕೊಂಡಿದ್ದರೆ, ಅದೇ ರೀತಿ ಬಿಗ್ ಬಿ ಅಮಿತಾಬ್ ಬಚ್ಚನ್ 4 ಲಕ್ಷ 20 ಸಾವಿರ ಫಾಲೋವರ್ಸ್ ಗಳನ್ನ ಕಳೆದುಕೊಂಡಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂರು ಲಕ್ಷ ಮೂವತ್ತು ಸಾವಿರ ಫಾಲೋವರ್ಸ್ ಗಳಿಗೆ ಕತ್ತರಿ ಪ್ರಯೋಗವಾಗಿದೆ.

ಸಲ್ಮಾನ್ ಖಾನ್, ಶಾರುಕ್ ಖಾನ್, ಅಮೀರ್ ಖಾನ್, ಪ್ರಿಯಾಂಕ ಚೋಪ್ರಾ, ಸೇರಿದಂತೆ ಅನೇಕ ಬಾಲಿವುಡ್ ನಟ-ನಟಿಯರ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳ ಅಕೌಂಟ್ ಗಳನ್ನ ಟ್ವಿಟ್ಟರ್ ನಿರ್ವಹಣಾ ತಂಡ ನಿಷ್ಕ್ರಯಗೊಳಿಸಿದೆ. ಇದರಿಂದಾಗಿ ಟ್ವಿಟ್ಟರ್ ಗೆ ಪ್ರಪಂಚದಾದ್ಯಂತ 77 ಲಕ್ಷ ಅಕೌಂಟ್ ಗಳನ್ನು ನಿರ್ವಹಿಸುವ ಭಾರ ಕಡಿಮೆ ಆಗಿದೆ.

ಈಗಾಗ್ಲೇ ಟ್ವಿಟ್ಟರ್ ಅಕೌಂಟ್ ಗಳಿಂದ ನಿರ್ಗಮಿಸಿದಂತಹ ಅಕೌಂಟ್ ಗಳು ಈಗ ಡಿಲೀಟ್ ಆಗಿಬಿಟ್ಟಿವೆ. ಇದರಿಂದ ಟ್ವಿಟ್ಟರ್ ನ ಗುಣಮಟ್ಟ ಮತ್ತು ಸೆಲೆಬ್ರಿಟಿಗಳ ಫಾಲೋವರ್ಸ್ ಗಳ ಮಹತ್ವ ಹೆಚ್ಚಾಗಲಿದೆ ಅಂತ ಟ್ವಿಟ್ಟರ್ ನಿರ್ವಹಣಾ ತಂಡ ಅಭಿಪ್ರಾಯ ಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...