alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಯಲ್ಲಿ ನಡೆದಿದೆ ಬ್ರೇಕಪ್ ಡ್ರಾಮಾ…!?

ಬಿಗ್ ಬಾಸ್ ಅತ್ಯಂತ ವಿವಾದಿತ ರಿಯಾಲಿಟಿ ಶೋಗಳಲ್ಲೊಂದು. ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಶನ್, ವಿನ್ನರ್ ಎಲ್ಲವೂ ಮೊದಲೇ ನಿರ್ಧಾರ ಆಗಿರುತ್ತದೆ ಅನ್ನೋ ಆರೋಪವಿದೆ. ಸ್ಪರ್ಧಿಗಳು ಮಾಡೋ ಜಗಳ, ಕಿತ್ತಾಟ, ರೊಮ್ಯಾನ್ಸ್ ಎಲ್ಲವೂ ಸ್ಕ್ರಿಪ್ಟೆಡ್ ಅಂತಾನೂ ಹೇಳಲಾಗುತ್ತದೆ.

ಬಿಗ್ ಬಾಸ್ 11ನೇ ಆವೃತ್ತಿಯಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ. ಸ್ಪರ್ಧಿ ಪ್ರಿಯಾಂಕ್ ಶರ್ಮಾ ಪ್ರೇಯಸಿ ದಿವ್ಯಾ ಅಗರ್ವಾಲ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ಲು. ಅಷ್ಟೇ ಅಲ್ಲ ಪ್ರಿಯಾಂಕ್ ಜೊತೆ ಅಲ್ಲೇ ಬ್ರೇಕಪ್ ಕೂಡ ಮಾಡಿಕೊಂಡು ಹೊರಬಿದ್ದಿದ್ದಾಳೆ. ಅದಾದ್ಮೇಲೆ ಪ್ರಿಯಾಂಕ್ ಕೂಡ ಬಿಕ್ಕಿ ಬಿಕ್ಕಿ ಅತ್ತಿದ್ದು ಈಗ ಹಳೆ ಸುದ್ದಿ.

ಅಷ್ಟಕ್ಕೂ ದಿವ್ಯಾ ಅಗರ್ವಾಲ್ ಸ್ವ ಇಚ್ಛೆಯಿಂದ ಇದನ್ನೆಲ್ಲ ಮಾಡಿಲ್ಲವಂತೆ. ಬಿಗ್ ಬಾಸ್ ಮನೆಯಲ್ಲಿ ಹೈಡ್ರಾಮಾ ಮಾಡಲು ದಿವ್ಯಾಗೆ ಕಲರ್ಸ್ ವಾಹಿನಿ ಭರ್ತಿ ಸಂಭಾವನೆ ಕೊಟ್ಟಿದೆಯಂತೆ. ಒಳಗಿರುವ ಸ್ಪರ್ಧಿಗಿಂತ ಮೂರು ಪಟ್ಟು ಹೆಚ್ಚು ಹಣ ಪಡೆದು, ದಿವ್ಯಾ ಬ್ರೇಕಪ್ ಡ್ರಾಮಾ ಮಾಡಿದ್ದಾಳೆ ಅಂತಾ ಹೇಳಲಾಗ್ತಿದೆ. ಎಲ್ಲವೂ ಟಿ ಆರ್ ಪಿಗಾಗಿ ಮಾಡಿರೋ ಗಿಮಿಕ್ ಅನ್ನೋ ಮಾತುಗಳು ಕೇಳಿ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...