alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಬದಿ ಅಲಂಕಾರಿಕ ವಸ್ತು ಮಾರಾಟ ಮಾಡಿದ ಪ್ರಿಯಾಮಣಿ

ಬೆಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಂಜುಳಾ ಎಂಬ ಮಹಿಳೆಗೆ ಸಹಾಯ ಮಾಡಲು ಪಂಚ ಭಾಷಾ ನಟಿ ಪ್ರಿಯಾ ಮಣಿ, ರಸ್ತೆ ಬದಿಯಲ್ಲಿ ನಿಂತು ಸ್ಟಿಕ್ಕರ್, ಹೇರ್ ಬ್ಯಾಂಡ್, ಕ್ಲಿಪ್‍ಗಳನ್ನು ಮಾರಾಟ ಮಾಡಿ ಹಣ ಸಂಗ್ರಹಿಸಿ ನೆರವು ನೀಡಿದ್ದಾರೆ.

ದೊಡ್ಡ ಗಣಪತಿ ದೇವಾಲಯದ ಎದುರು ನಟಿ ಪ್ರಿಯಾಮಣಿ ತಳ್ಳುವ ಗಾಡಿಯಲ್ಲಿ ಅಲಂಕಾರಿಕ ವಸ್ತುಗಳಾದ ಬಳೆ, ರಿಂಗ್, ಸ್ಟಿಕ್ಕರ್, ಹೇರ್ ಬ್ಯಾಂಡ್ ಮಾರುತ್ತಿರುವುದನ್ನು ಕಂಡು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ನಟಿಯಿಂದ ತಮಗಿಷ್ಟವಾದ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಿ, ಜೊತೆಗೆ ಸೆಲ್ಫಿಯನ್ನೂ ತೆಗೆಸಿಕೊಂಡು ಹೋಗಿದ್ದಾರೆ. ಇಷ್ಟಕ್ಕು ಪ್ರಿಯಾಮಣಿ ಹೀಗೆ ರಸ್ತೆ ಬದಿ ನಿಂತು ಅಲಂಕಾರಿಕ ವಸ್ತು ಮಾರಟ ಮಾಡಲು ಕಾಣವೇನು ಅಂದ್ಕೊಂಡ್ರಾ…? ಇಲ್ಲಿದೆ ಮಾಹಿತಿ.

ಖಾಸಗಿ ಚಾನಲ್ ಒಂದರಲ್ಲಿ ಪ್ರಸಾರವಾಗುತ್ತಿರುವ ಸದಾ ನಿಮ್ಮೊಂದಿಗೆ ಕಾರ್ಯಕ್ರಮದಲ್ಲಿ ಪ್ರಿಯಾಮಣಿ ಭಾಗವಹಿಸುತ್ತಿದ್ದು, ಬಡ ಕುಟುಂಬ ಮಂಜುಳಾ-ಸಿದ್ದರಾಜು ಅವರಿಗೆ ಸಹಾಯ ಮಾಡಲು ನಿರ್ಧರಿಸಿ ಹೀಗೆ ರಸ್ತೆ ಬದಿ ನಿಂತು ವ್ಯಾಪಾರ ಮಾಡಿದರು.

ಮಂಜುಳಾರಿಗೆ ಕಿಡ್ನಿ ಸಮಸ್ಯೆ ಇದ್ದು, ಮಗನಿಗೆ ಹೃದಯದಲ್ಲಿ ಸಮಸ್ಯೆ ಇದೆ. ದೋಬಿ ಕೆಲಸ ಮಾಡುತ್ತಿರುವ ಸಿದ್ಧರಾಜುಗೆ ಬರುವ ಹಣ ಕುಟುಂಬ ನಿರ್ವಹಿಸಲು ಸಾಕಾಗುತ್ತಿಲ್ಲ. ಚಿಕಿತ್ಸೆಗಾಗಿ ಈಗಾಗಲೇ ಸಾಕಷ್ಟು ಸಾಲವನ್ನು ಮಾಡಿದ್ದಾರೆ. ಇಂತಹ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಪ್ರಿಯಾಮಣಿ ಅಲಂಕಾರಿಕ ವಸ್ತುಗಳನ್ನು ಮಾರಿ ಗಳಿಸಿದ ಹಣವನ್ನು ಆ ಕುಟುಂಬಕ್ಕೆ ನೀಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...