alex Certify
ಕನ್ನಡ ದುನಿಯಾ       Mobile App
       

Kannada Duniya

ಕಮೆಂಟ್ ನೋಡಿ ಶಾಕ್ ಆದ ನಟಿ ಪ್ರಿಯಾಮಣಿ

priyamani engagement 3467ಬಹು ಭಾಷಾ ನಟಿ ಪ್ರಿಯಾಮಣಿ ಕಳೆದ ವಾರವಷ್ಟೇ ತಮ್ಮ ಬಹು ಕಾಲದ ಗೆಳೆಯ ಮುಂಬೈ ಮೂಲದ ಮುಸ್ತಾಫಾ ರಾಜ್ ಜೊತೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬ ಸದಸ್ಯರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಬಳಿಕ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಈ ಸಂತಸವನ್ನು ಹಂಚಿಕೊಂಡ ಪ್ರಿಯಾಮಣಿ ‘Happy to announce that Mustufa Raj and I got engaged on Friday the 27th at a close and private function at home!’ ಎಂದು ಬರೆದುಕೊಂಡಿದ್ದಲ್ಲದೇ ನಿಶ್ಚಿತಾರ್ಥದ ಫೋಟೋವನ್ನೂ ಅಪ್ ಲೋಡ್ ಮಾಡಿದ್ದರು.

ಇದಾದ ಬಳಿಕ ಬಂದ ಕಮೆಂಟ್ ಗಳು ಪ್ರಿಯಾಮಣಿಯವರನ್ನು ಶಾಕ್ ಆಗುವಂತೆ ಮಾಡಿವೆ. ಮುಸ್ಲಿಂ ಯುವಕನನ್ನು ಮದುವೆಯಾಗುತ್ತಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಇದನ್ನು ‘ಲವ್ ಜಿಹಾದ್’ ಗೆ ಹೋಲಿಸಿದ್ದಾರೆ. ಆಗ ಮತ್ತೊಂದು ಟ್ವೀಟ್ ಮಾಡಿರುವ ಪ್ರಿಯಾಮಣಿ ‘Fed up of so much of hatred and negativity with regards to the engagement news that I shared this morning hoping that everyone would be a part of my new journey and bless me with ur kind messages..but I’m appalled by so much of negative reactions! Grow up you people!!!ITS MY LIFE..and I’m NOT answerable to any one apart from my parents and my fiance.’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...