alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಸ್ಟರ್ ನಲ್ಲಿ ಮಿಂಚಿದ್ರೂ ನಟಿ ಆಕ್ರೋಶಕ್ಕೆ ಕಾರಣವೇನು…?

‘ಅಂಗುಳಿಕ’ ಟಾಲಿವುಡ್ ನಲ್ಲಿ ಭಾರೀ ನಿರೀಕ್ಷೆ, ಕುತೂಹಲ ಮೂಡಿಸಿರುವ ಚಿತ್ರ. ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಪ್ರಿಯಾಮಣಿ ಪೋಸ್ಟರ್ ನಲ್ಲಿ ಮಿಂಚಿದ್ದಾರೆ. ‘ಆರುಂಧತಿ’ ರೀತಿ ಇದೂ ಕೂಡ ಹಲ್ ಚಲ್ ಎಬ್ಬಿಸುವ ನಿರೀಕ್ಷೆ ಇದೆ. ಆದರೆ, ಪ್ರಿಯಾಮಣಿ ಚಿತ್ರ ತಂಡದ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂದೆ ಪ್ರಿಯಾಮಣಿ ಟಾಲಿವುಡ್ ನಲ್ಲಿ ಬಿಗ್ ಸ್ಟಾರ್ ಗಳೊಂದಿಗೆ ಮಿಂಚಿದ್ದರು. ‘ಯಮದೊಂಗ’ದಲ್ಲಿ ಜೂನಿಯರ್ ಎನ್.ಟಿ.ಆರ್. ಜೊತೆ ಅಭಿನಯಿಸಿದ್ದ ಪ್ರಿಯಾಮಣಿ, ನಂತರ ಸ್ಟಾರ್ ಗಳ ಚಿತ್ರಗಳಲ್ಲಿ ಕಾಣಿಸಿಕೊಂಡರು. ಬಳಿಕ ಟಾಲಿವುಡ್ ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದು ಕಡಿಮೆಯೇ.

ಆರಂಭದಲ್ಲಿ ‘ಅಂಗುಳಿಕ’ ಚಿತ್ರದಲ್ಲಿ ಅಭಿನಯಿಸುವುದಾಗಿ ಹೇಳಿದ್ದ ಪ್ರಿಯಾಮಣಿ ನಂತರದಲ್ಲಿ ಹೊರಬಂದಿದ್ದರು. ಚಿತ್ರದಲ್ಲಿ ಅವರು ಅಭಿನಯಿಸದಿದ್ದರೂ, ಅವರ ಫೋಟೋವನ್ನು ಪೋಸ್ಟರ್ ನಲ್ಲಿ ಬಳಸಿಕೊಳ್ಳಲಾಗಿದೆ.

ಪ್ರಿಯಾಮಣಿ ಚಿತ್ರರಂಗದಿಂದ ಹೊರಬಂದು ಬೇರೆ ನಟಿ ಅಭಿನಯಿಸಿದ್ದಾರೆ. ಹೀಗಿದ್ದರೂ, ಬಿಡುಗಡೆ ಮಾಡಲಾಗಿರುವ ಮೋಷನ್ ಪೋಸ್ಟರ್ ನಲ್ಲಿ ತಮ್ಮ ಚಿತ್ರವನ್ನು ಬಳಸಿಕೊಂಡಿರುವುದು ಪ್ರಿಯಾಮಣಿ ಕೋಪಕ್ಕೆ ಕಾರಣವಾಗಿದೆ. ಚಿತ್ರದಲ್ಲಿ ನಟಿಸದಿದ್ದರೂ, ತಮ್ಮ ಫೋಟೋ ಬಳಸಿಕೊಂಡಿರುವ ಹಿನ್ನಲೆಯಲ್ಲಿ ಕಲಾವಿದರ ಸಂಘಕ್ಕೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...