alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತಷ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾಳೆ ಕಣ್ಸನ್ನೆ ಬೆಡಗಿ ಪ್ರಿಯಾ

ತಾನು ನಟಿಸಿದ್ದ ಚಿತ್ರವೊಂದರ ಹಾಡಿನ ಸನ್ನಿವೇಶದಲ್ಲಿ ತನ್ನ ಕಣ್ಸನ್ನೇ ಮೂಲಕವೇ ಕೋಟ್ಯಾಂತರ ಯುವಕರ ಮನಗೆದ್ದ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಇಂಟರ್ನೆಟ್ ಸೆನ್ಸೇಶನ್ ಆಗಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾ ಪ್ರಕಾಶ್ ಗೆ ಈಗ ಭಾರೀ ಸಂಖ್ಯೆಯಲ್ಲಿ ಫಾಲೋವರ್ ಗಳಿದ್ದು, ಆಕೆಯ ಒಂದೊಂದು ಪೋಸ್ಟ್ ಗೂ ಲಕ್ಷಾಂತರ ಆದಾಯ ಬರುತ್ತಿದೆ. ಮಲಯಾಳಂ ಚಿತ್ರ ‘ಒರು ಅಡಾರ್ ಲವ್’ ನಲ್ಲಿ ಸಹ ನಟಿಯಾಗಿದ್ದ ಪ್ರಿಯಾ ಪ್ರಕಾಶ್, ತನ್ನ ಕಣ್ಸನ್ನೆ ಕಾರಣಕ್ಕೆ ಜನಪ್ರಿಯಳಾಗುತ್ತಿದ್ದಂತೆಯೇ ನಿರ್ಮಾಪಕರು ಈಗ ಆಕೆಯನ್ನೇ ಮುಖ್ಯ ನಾಯಕಿಯನ್ನಾಗಿ ಮಾಡಿಕೊಂಡಿದ್ದಾರೆ.

ಆಕೆಯ ಕಣ್ಸನ್ನೆಗೆ ಕಾರಣನಾಗಿದ್ದ ಸಹ ನಟ ರೋಷನ್ ಅಬ್ದುಲ್ ರವೂಫ್ ಕೂಡಾ ಈಗ ಚಿತ್ರದ ಪ್ರಮುಖ ಪಾತ್ರಧಾರಿಯಾಗಿದ್ದು, ಇವರುಗಳ ಜನಪ್ರಿಯತೆಯನ್ನೇ ಬಳಸಿಕೊಳ್ಳುತ್ತಿರುವ ಚಿತ್ರತಂಡ ಕೆಲ ದಿನಗಳ ಹಿಂದೆ ಪ್ರಿಯಾ ಹಾಗೂ ರೋಷನ್ ಹೋಳಿ ಆಡುತ್ತಿರುವ ಚಿತ್ರಗಳನ್ನು ಪೋಸ್ಟ್ ಆಗುವಂತೆ ನೋಡಿಕೊಂಡಿತ್ತು.

ಇದೀಗ ಈ ಜೋಡಿ ಮತ್ತೊಮ್ಮೆ ತಮ್ಮಿಬ್ಬರ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿವೆ. ತಲೆಗೆ ಹೂವು ಮುಡಿದುಕೊಂಡು ಕ್ಯೂಟ್ ಆಗಿ ಕಾಣುತ್ತಿರುವ ಈ ಜೋಡಿ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

🚻

A post shared by priya prakash varrier (@priya.p.varrier) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...