alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದಿಯಲ್ಲೂ ಬಂತು ಕಣ್ಸನ್ನೆ ಹುಡುಗಿ ಪ್ರಿಯಾ ಹಾಡು

ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ರಾತ್ರೋರಾತ್ರಿ ಇಂಟರ್ನೆಟ್ ದುನಿಯಾದಲ್ಲಿ ದಾಖಲೆ ಬರೆದಿದ್ದಾಳೆ. ಪ್ರಿಯಾ ಪ್ರಕಾಶ್ ನಗುವಿಗೆ ಜನ ಬೋಲ್ಡ್ ಆಗಿದ್ದಾರೆ. ಸದ್ಯ ಸುದ್ದಿಯಲ್ಲಿರುವ ಪ್ರಿಯಾ ಅಭಿನಯದ ಮಲಯಾಳಂ ಹಾಡನ್ನು ಯೂಟ್ಯೂಬ್ ನಲ್ಲಿ ಈಗಾಗಲೇ 10 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.

ಈಗ ಪ್ರಿಯಾ ಅಭಿನಯದ ಮಲಯಾಳಂ ಹಾಡಿನ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಯೂಟ್ಯೂಬ್ ನಲ್ಲಿ ಹಾಡು ಲಭ್ಯವಿದೆ. ಅಭಿಮಾನಿಯೊಬ್ಬ ಮಲಯಾಳಂ ಹಾಡನ್ನು ಹಿಂದಿಗೆ ಬದಲಾಯಿಸಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಹಿಂದಿ ಆವೃತ್ತಿ ಹಾಡು ಆಂಕೋ ತೇರಿ ಕಹ ರಹೀ ಹೇ…ತುಮ್ಕೋ ಮುಜಸೇ ಪ್ಯಾರ್ ಕರೇ ಎಂದು ಶುರುವಾಗುತ್ತದೆ. ಹಿಂದಿ ಹಾಡು ಮಲಯಾಳಂ ಹಾಡಿನ ಭಾಷಾಂತರವಲ್ಲ. ಆದ್ರೆ ಹಾಡಿಗೆ ಮಲಯಾಳಂ ಹಾಡಿನ ಟ್ಯೂನ್ ನೀಡಲಾಗಿದೆ.

ಹಿಂದಿ ಆವೃತ್ತಿಯನ್ನೂ ಜನರು ಇಷ್ಟಪಡ್ತಿದ್ದಾರೆ. ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಮಂದಿ ಹಾಡನ್ನು ವೀಕ್ಷಿಸಿದ್ದಾರೆ. ಈ ಮಧ್ಯೆ ಪ್ರಿಯಾ ಹಾಡಿನ ಬಗ್ಗೆ ವಿವಾದ ಮುಂದುವರೆದಿದೆ. ಆಂಧ್ರದಲ್ಲಿ ಎಫ್ ಐ ಆರ್ ದಾಖಲಾಗಿದ್ದರೆ, ಮುಂಬೈ ರಾಜಾ ಹೆಸರಿನ ಸಂಸ್ಥೆಯೊಂದು ಹಾಡಿಗೆ ನಿಷೇಧ ಹೇರುವಂತೆ ಕೋರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...