alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸ ಹುಡುಕ್ತಿದ್ದಾಳಾ ನಟಿ ಪ್ರಿಯಾ ಪ್ರಕಾಶ್…!?

ಕಣ್ಸನ್ನೆ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದ ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಸಾಮಾಜಿಕ ಜಾಲತಾಣದ ಸೆನ್ಸೇಷನ್ ಪ್ರಿಯಾ ಪ್ರಕಾಶ್ ಪ್ರತಿಯೊಂದು ವಿಡಿಯೋವನ್ನು ಅಭಿಮಾನಿಗಳು ಇಷ್ಟಪಟ್ಟು ನೋಡ್ತಾರೆ. ಇಷ್ಟೆಲ್ಲ ಹೆಸರು ಮಾಡಿರುವ ನಟಿಗೆ ಕೈ ತುಂಬಾ ಕೆಲಸವಿರುತ್ತೆ ಎಂದು ನೀವಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಪ್ರಿಯಾ ಪ್ರಕಾಶ್ ನಿರುದ್ಯೋಗಿಯಂತೆ.

ಮಲಯಾಳಂ ಚಿತ್ರ ‘ಓರು ಆದರ್ ಲವ್’ ಚಿತ್ರದ ಸಹ ನಟ ರೋಷನ್ ಅಬ್ದುಲ್ ಜೊತೆಗಿರುವ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾ ಹಂಚಿಕೊಂಡಿದ್ದಾಳೆ. ಅದ್ರ ಜೊತೆ ನಾನು ನಿರುದ್ಯೋಗಿ ಎಂಬರ್ಥದಲ್ಲಿ ಶೀರ್ಷಿಕೆ ಹಾಕಿದ್ದಾಳೆ. ಫೋಟೋದಲ್ಲಿ ಪ್ರಿಯಾ ಮುದ್ದಾಗಿ ಕಾಣ್ತಿದ್ದಾಳೆ.

ಫೋಟೋಕ್ಕೆ ರೋಮ್ಯಾಂಟಿಕ್ ಫೋಸ್ ನೀಡಿದ್ದಾರೆ ಪ್ರಿಯಾ-ರೋಷನ್. ಹಿಂಭಾಗ ಕೂಡ ರೋಮ್ಯಾಂಟಿಕ್ ಆಗಿದೆ. ನೀವು ನಿರುದ್ಯೋಗಿಗಳಾಗಿ ಸುತ್ತಾಡುತ್ತಿದ್ದರೆ ಬೇರೆಯವರು ಫೋಟೋ ಕ್ಲಿಕ್ಕಿಸಲು ಹಾಗೂ ಫೋಸ್ ನೀಡಲು ಸದಾ ಸಿದ್ಧರಾಗಿರ್ತಾರೆ ಎಂದು ಪ್ರಿಯಾ ಬರೆದುಕೊಂಡಿದ್ದಾಳೆ. ಪ್ರಿಯಾ ಸದ್ಯದಲ್ಲಿಯೇ ಬಾಲಿವುಡ್ ಗೆ ಎಂಟ್ರಿ ನೀಡಲಿದ್ದಾಳೆ ಎನ್ನಲಾಗ್ತಿದೆ.

ರಣವೀರ್ ಸಿಂಗ್ ಹಾಗೂ ಸಾರಾ ಅಲಿ ಖಾನ್ ಚಿತ್ರ ಸಾಂಬಾದಲ್ಲಿ ಪ್ರಿಯಾ ನಟಿಸುವ ಸಾಧ್ಯತೆ ಹೆಚ್ಚಿದೆ. ಆದ್ರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಕೇರಳದ ವಿಮಲಾ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಂ ವಿದ್ಯಾರ್ಥಿನಿಯಾಗಿರುವ ಪ್ರಿಯಾ ಮಲಯಾಳಂ ಚಿತ್ರದ ಶೂಟಿಂಗ್ ನಲ್ಲಿ ಸದ್ಯಕ್ಕೆ ಬ್ಯುಸಿಯಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...