alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾ ಪ್ರಕಾಶ್ ಹೊಸ ವಿಡಿಯೋ ವೈರಲ್

ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ಮತ್ತೆ ಸುದ್ದಿಯಲ್ಲಿದ್ದಾಳೆ. ಮಲಯಾಳಂ ಮೊದಲ ಚಿತ್ರದ ಹಾಡಿಗೆ ಕಣ್ಣು ಹೊಡೆದು ಎಲ್ಲರ ಹೃದಯ ಗೆದ್ದಿದ್ದ ಪ್ರಿಯಾ ಪ್ರಕಾಶ್ ಈಗ ಮತ್ತೊಂದು ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾಳೆ. ವಿಡಿಯೋ ನೋಡಿದ ಪ್ರಿಯಾ ಅಭಿಮಾನಿಗಳು ನೆಚ್ಚಿನ ನಟಿಗೆ ಮತ್ತಷ್ಟು ಫಿದಾ ಆಗಿದ್ದಾರೆ.

ಟ್ವೀಟರ್ ನಲ್ಲಿ ಪ್ರಿಯಾ ಹಾಡು ಹಾಡುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾಳೆ. ಕಭಿ ಅಲ್ವಿದ ನಾ ಕೆಹನಾ ಚಿತ್ರದ ಟೈಟಲ್ ಹಾಡನ್ನು ಪ್ರಿಯಾ ಹಾಡಿದ್ದಾಳೆ. ಪ್ರಿಯಾ ಹಾಡು ಕೇಳಿದ ಅಭಿಮಾನಿಗಳು ಕಣ್ಣು ಹೊಡೆಯೋದು, ಡಾನ್ಸ್ ಮಾಡೋದೊಂದೇ ಅಲ್ಲ ಪ್ರಿಯಾ ಚೆನ್ನಾಗಿ ಹಾಡು ಹಾಡ್ತಾಳೆ ಅಂತಾ ಹೊಗಳ್ತಿದ್ದಾರೆ.

ಆದ್ರೆ ಕೆಲವರು ಟ್ವೀಟರ್ ನಲ್ಲಿ ಪ್ರಿಯಾ ಕಾಲು ಎಳೆದಿದ್ದಾರೆ. ಚೆನ್ನಾಗಿ ಲಿಪ್ ಸಿಂಕ್ ಮಾಡಿದ್ದಾಳೆ. ಈ ಹಾಡನ್ನು ಪ್ರಿಯಾ ಹಾಡಿಲ್ಲ ಎನ್ನುತ್ತಿದ್ದಾರೆ. ಪ್ರಿಯಾ ಅಭಿಮಾನಿಗಳು ಮಾತ್ರ ಇದನ್ನು ಒಪ್ಪಲು ಸಿದ್ಧವಿಲ್ಲ. ಹಾಡನ್ನು ಪ್ರಿಯಾ ಹಾಡಿದ್ದಾಳೆ ಎನ್ನುತ್ತಿದ್ದಾರೆ. ಅದೇನೇ ಇರಲಿ ಕಣ್ಣು ಹೊಡೆದು ರಾತ್ರಿ ಬೆಳಗಾಗೋದ್ರಲ್ಲಿ ಇಂಟರ್ನೆಟ್ ಸೆನ್ಸೇಶನ್ ಆದ ಪ್ರಿಯಾ ಕೆಲಸದ ಮೇಲೆ ಅಭಿಮಾನಿಗಳು ಕಣ್ಣಿಟ್ಟಿರುತ್ತಾರೆ ಎಂಬುದು ಸುಳ್ಳಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...