alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಪ್ರಿಯಾ ಪ್ರಕಾಶ್ ಗೆ ರಿಲೀಫ್

ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ಈಗ ಎಲ್ಲರಿಗೂ ಪರಿಚಿತ. ಓರು ಅದರ್ ಲವ್ ಚಿತ್ರದ ಹಾಡೊಂದರಲ್ಲಿ ಕಣ್ಣು ಮಿಟುಕಿಸಿ ರಾತ್ರೋರಾತ್ರಿ ಚರ್ಚೆಗೆ ಬಂದಿದ್ದಳು. ಇಂಟರ್ನೆಟ್ ಸೆನ್ಸೇಷನ್ ಪ್ರಿಯಾ ಪ್ರಕಾಶ್, ಹಾಡು ಬಿಡುಗಡೆಯಾದ ಕೆಲ ವಾರದಲ್ಲಿಯೇ ಸಮಸ್ಯೆ ಎದುರಿಸಬೇಕಾಯ್ತು.

ಪ್ರಿಯಾ ಕಣ್ಣು ಮಿಟುಕಿಸುವ ಹಾಡು ಸಮುದಾಯವೊಂದರ ಭಾವನೆಗೆ ಧಕ್ಕೆ ತರ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಹಾಡಿಗೆ ನಿಷೇಧ ಹೇರುವಂತೆ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.

‘Manikya Malaraya Poovi’ ಹಾಡನ್ನು ಇಂಗ್ಲೀಷ್ ಗೆ ಅನುವಾದ ಮಾಡಿದ್ರೆ ಮುಸ್ಲಿಂ ಪೈಗಂಬರರಿಗೆ ಅವಮಾನ ಮಾಡಿದಂತೆ ಎಂದು ಮುಸ್ಲಿಂ ಸಂಘಟನೆಗಳು ವಾದ ಮಾಡಿದ್ದವು. ತೆಲಂಗಾಣದಲ್ಲಿ ಎಫ್ ಐ ಆರ್ ಕೂಡ ದಾಖಲಾಗಿತ್ತು. ಆದ್ರೆ ಚಿತ್ರ ನಿರ್ದೇಶಕರು ಹಾಗೂ ನಟಿ ಪ್ರಿಯಾ ಇದಕ್ಕೆ ಸ್ಪಷ್ಟನೆ ನೀಡಿದ್ದರು. ಮುಸ್ಲಿಂ ವಿರೋಧಿ ಹಾಡು ಇದಲ್ಲ. ಮೊಹಮ್ಮದ್ ಸಾಬ್ ರನ್ನು ಶ್ಲಾಘಿಸುವ ಹಾಡು ಇದು ಎಂದಿದ್ದರು. ಎಫ್ ಐ ಆರ್ ರದ್ದು ಮಾಡುವಂತೆ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...