alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಸನ್ನೆ ಬೆಡಗಿ ಪ್ರಿಯಾಳ ಹೋಳಿ ಆಚರಣೆ ಹೇಗಿತ್ತು ಗೊತ್ತಾ?

ಒಂದೇ ದಿನದಲ್ಲಿ ಇಂಟರ್ನೆಟ್ ನಲ್ಲಿ ಜನರಿಗೆ ಮೋಡಿ ಮಾಡಿದ್ದ ‘ಒರು ಅಡರ್ ಲವ್’ ಚಿತ್ರದ ನಾಯಕಿ ಪ್ರಿಯಾ ವಾರಿಯರ್ ಗೆ ಈ ಬಾರಿ ಹೋಳಿ ಹಬ್ಬ ಸಖತ್ ಸ್ಪೆಷಲ್. ಮಲಯಾಳಂ ಚಿತ್ರದ ಒಂದು ಹಾಡಿನ ಮೂಲಕ ಪ್ರಿಯಾ ವಾರಿಯರ್ ಹಾಗೂ ನಟ ರೋಶನ್ ಅಬ್ದುಲ್ ರವೂಫ್ ಭಾರೀ ಜನಪ್ರಿಯತೆ ಗಳಿಸಿದ್ದಾರೆ.

ಇದೇ ಖುಷಿಯಲ್ಲಿ ಹಿಂದೆಂದಿಗಿಂತ್ಲೂ ಚೆನ್ನಾಗಿ ಹೋಳಿ ಆಚರಿಸಿದ್ದಾರೆ. ಒಬ್ಬರ ಮೇಲೊಬ್ಬರು ಬಣ್ಣ ಎರಚಿ ಖುಷಿ ಪಡ್ತಿರೋ ವಿಡಿಯೋವನ್ನು ಪ್ರಿಯಾ ವಾರಿಯರ್ ಅಪ್ಲೋಡ್ ಮಾಡಿದ್ದಾರೆ. ಈ ಕ್ಯೂಟ್ ಜೋಡಿಯ ರಂಗಿನಾಟ ಕೂಡ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.

‘ಮಾಣಿಕ್ಯ ಮಲರಯ ಪೂವಿ’ ಹಾಡಿನಲ್ಲಿ ಪ್ರಿಯಾ ವಾರಿಯರ್ ಕಣ್ಣು ಹೊಡೆದಿರೋ ದೃಶ್ಯ ವೈರಲ್ ಆಗಿತ್ತು. ಯುವ ನಟಿಯ ಅಭಿನಯವನ್ನು ರಿಶಿಕಪೂರ್, ಅಲ್ಲು ಅರ್ಜುನ್, ಸಿದ್ದಾರ್ಥ್ ರಂತಹ ಘಟಾನುಘಟಿ ನಟರು ಕೂಡ ಮೆಚ್ಚಿಕೊಂಡಿದ್ದರು. ಈ ಹಾಡು ವೈರಲ್ ಆಗ್ತಿದ್ದಂತೆ ಪ್ರಿಯಾ ವಾರಿಯರ್ ಗೆ ಚಿತ್ರರಂಗದಿಂದ ಸಾಕಷ್ಟು ಆಫರ್ ಕೂಡ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...