alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾ ವಾರಿಯರ್ ಅಭಿಮಾನಿಗಳಿಗೆ ಬೇಸರದ ಸುದ್ದಿ

‘ಒರು ಅಡರ್ ಲವ್’ ಚಿತ್ರದ ಹಾಡಿನ ಮೂಲಕ ಮನೆಮಾತಾಗಿರುವ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯದಲ್ಲೇ ಬಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾಳೆ ಅನ್ನೋ ಸುದ್ದಿ ಇತ್ತು. ಅದರಲ್ಲೂ ರಣವೀರ್ ಹಾಗೂ ದೀಪಿಕಾ ಪಡುಕೋಣೆ ಜೊತೆಗೆ ಅಭಿನಯಿಸಬೇಕು ಅನ್ನೋ ಆಸೆಯನ್ನು ಪ್ರಿಯಾ ವ್ಯಕ್ತಪಡಿಸಿದ್ರು.

ಕೆಲ ದಿನಗಳ ಹಿಂದಷ್ಟೆ ರಣವೀರ್ ಸಿಂಗ್ ಅಭಿನಯದ ‘ಸಿಂಬಾ’ ಚಿತ್ರಕ್ಕೆ ಪ್ರಿಯಾ ವಾರಿಯರ್ ನಾಯಕಿ ಅನ್ನೋ ಸುದ್ದಿ ಹರಿದಾಡಿತ್ತು. ಆದ್ರೆ ಅಸಲಿ ವಿಷಯ ಈಗ ಬಯಲಾಗಿದೆ. ಸಿಂಬಾ ಚಿತ್ರದಲ್ಲಿ ರಣವೀರ್ ಗೆ ಜೋಡಿಯಾಗಿ ಪ್ರಿಯಾಳನ್ನು ಆಯ್ಕೆ ಮಾಡುವ ಪ್ರಸ್ತಾಪವೇ ಚಿತ್ರತಂಡದ ಮುಂದೆ ಇರಲಿಲ್ಲವಂತೆ.

ಸಿಂಬಾ ಚಿತ್ರಕ್ಕೆ ನಾಯಕಿ ಆಯ್ಕೆ ವೇಳೆ ಪ್ರಿಯಾ ಹೆಸರೇ ಇರಲಿಲ್ಲ ಅಂತಾ ಮೂಲಗಳು ಸ್ಪಷ್ಟಪಡಿಸಿವೆ. ಸಿಂಬಾ ಚಿತ್ರದಲ್ಲಿ ಸಾರಾ ಅಲಿ ಖಾನ್, ಜಾಹ್ನವಿ ಕಪೂರ್, ಆಲಿಯಾ ಭಟ್ ಹಾಗೂ ಶ್ರದ್ಧಾ ಕಪೂರ್ ಹೆಸರು ಕೂಡ ಕೇಳಿ ಬಂದಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...