alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಸನ್ನೆಯಿಂದ್ಲೇ ಹೃದಯ ಕದ್ದಿರುವ ಪ್ರಿಯಾ ಇನ್ನೂ ಸಿಂಗಲ್

ಪ್ರಿಯಾ ವಾರಿಯರ್ ಹೆಸರು ಈಗ ಭಾರತದಲ್ಲಂತೂ ಎಲ್ಲರಿಗೂ ಚಿರಪರಿಚಿತ. ಮಲಯಾಳಂ ಚಿತ್ರದ ಹಾಡೊಂದರಲ್ಲಿ ಕಣ್ಸನ್ನೆ ಮೂಲಕವೇ ಯುವಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾಳೆ ಈ ಚೆಲುವೆ. ಕೆಲವೇ ಘಂಟೆಗಳಲ್ಲಿ ಇಂಟರ್ನೆಟ್ ಸೆನ್ಸೇಶನ್ ಆಗಿ ಬದಲಾಗಿದ್ದಾಳೆ ಪ್ರಿಯಾ.

ಸೋಶಿಯಲ್ ಮೀಡಿಯಾದಲ್ಲಂತೂ ಎಲ್ಲರಿಗೂ ಈ ಕ್ಯೂಟ್ ಗರ್ಲ್ ಬಗ್ಗೆ ಕುತೂಹಲ. ಪ್ರಿಯಾ ವಾರಿಯರ್ ಬಗ್ಗೆ ಕೆಲವೊಂದು ಇಂಟ್ರೆಸ್ಟಿಂಗ್ ಮಾಹಿತಿಗಳು ಇಲ್ಲಿವೆ.

ಇವಳ ನಿಜವಾದ ಹೆಸರು ಪ್ರಿಯಾ ಪ್ರಕಾಶ್ ವಾರಿಯರ್. 18ರ ಹರೆಯದ ಪ್ರಿಯಾ ಕೇರಳ ಮೂಲದವಳು.

ಮಲಯಾಳಂ ಚಿತ್ರ ‘Oru Adaar Love’ ಮೂಲಕ ಪ್ರಿಯಾ ಸಿನೆಮಾ ರಂಗಕ್ಕೆ ಎಂಟ್ರಿ ಕೊಡ್ತಿದ್ದಾಳೆ. ಓಮರ್ ಲುಲು ನಿರ್ದೇಶನದ ಈ ಚಿತ್ರ ಮಾರ್ಚ್ 3ಕ್ಕೆ ತೆರೆ ಕಾಣಲಿದೆ.

ತ್ರಿಶೂರ್ ನ ವಿಮಲಾ ಕಾಲೇಜಿನಲ್ಲಿ ಓದುತ್ತಿರುವ ಪ್ರಿಯಾ ಮೊದಲ ವರ್ಷದ ಬಿ.ಕಾಂ ವಿದ್ಯಾರ್ಥಿನಿ.

ಸಿನೆಮಾದ ಕ್ಲಿಪ್ ವೈರಲ್ ಆಗಿದ್ದಂತೆ ಇನ್ ಸ್ಟಾಗ್ರಾಮ್ನಲ್ಲಿ ಪ್ರಿಯಾಳ ಫಾಲೋವರ್ಸ್ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಸದ್ಯ ಪ್ರಿಯಾ 1.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಪ್ರಿಯಾಗೆ ಸಂಗೀತ ಬಲು ಪ್ರಿಯ. ಡಾನ್ಸ್ ಮತ್ತು ಟ್ರಾವೆಲಿಂಗ್ ಬಗ್ಗೆ ಹೆಚ್ಚು ಆಸಕ್ತಿ ಇದೆ.

ಪ್ರಿಯಾ ಸದ್ಯ ಸಿಂಗಲ್, ರೆಡಿ ಟು ಮಿಂಗಲ್ ಎನ್ನುತ್ತಿದ್ದಾರೆ ಅಭಿಮಾನಿಗಳು.

ವೈರಲ್ ಆಗಿರೋ ಮಾಣಿಕ್ಯ ಮಲರಯ ಹಾಡನ್ನು ಈಗಾಗ್ಲೇ 6.3 ಮಿಲಿಯನ್ ಜನರು ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...