alex Certify
ಕನ್ನಡ ದುನಿಯಾ       Mobile App
       

Kannada Duniya

ಚೀರಾಡುತ್ತ ಪ್ರಿಯಾ ಪ್ರಕಾಶ್ ಪೂರ್ಣಗೊಳಿಸಿದ್ಲು ಚಾಲೆಂಜ್

ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ರಾತ್ರೋರಾತ್ರಿ ಹೆಸರು ಮಾಡಿರುವ ಕಣ್ಸನ್ನೆ ಬೆಡಗಿ ಪ್ರಿಯಾ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ಮಲೆಯಾಳಂ ನಟಿ ಪ್ರಿಯಾಳ ಒಂದು ಚಿತ್ರವೂ ಇನ್ನೂ ಬಿಡುಗಡೆಯಾಗಿಲ್ಲ. ಒರು ಅದರ್ ಲವ್ ಸೆಪ್ಟೆಂಬರ್ ನಲ್ಲಿ ತೆರೆಗೆ ಬರಲಿದೆ. ಈ ಮಧ್ಯೆ ಪ್ರಿಯಾ, ಇನ್ನೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ.

ಪ್ರಿಯಾ, ರಿಸರ್ವ್ ರೋಲರ್ ಕೋಸ್ಟರ್ ರೈಡ್ ಮಾಡಿದ್ದಾಳೆ. ಭಾನುವಾರ ಇದ್ರ ವಿಡಿಯೋವನ್ನು ಪ್ರಿಯಾ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದು, ಈವರೆಗೆ 8 ಲಕ್ಷಕ್ಕೂ ಹೆಚ್ಚು ಮಂದಿ ಅದನ್ನು ವೀಕ್ಷಣೆ ಮಾಡಿದ್ದಾರೆ. ಒರು ಅದರ್ ಲವ್ ಚಿತ್ರದ ನಟ ರೋಶನ್ ಅಬ್ದುಲ್ಲಾ, ಪ್ರಿಯಾಗೆ ರಿಸರ್ವ್ ರೋಲರ್ ಕೋಸ್ಟರ್ ರೈಡ್ ಚಾಲೆಂಜ್ ನೀಡಿದ್ದ. ಚಾಲೆಂಜ್ ಪೂರ್ಣಗೊಳಿಸಿರುವ ಪ್ರಿಯಾ, ರೋಲರ್ ಕೋಸ್ಟರ್ ನಲ್ಲಿ ಸಿಕ್ಕಾಪಟ್ಟೆ ಚೀರಾಡಿದ್ದಾಳೆ. ಆದ್ರೆ ರೈಡ್ ತುಂಬಾ ಮಜವಾಗಿತ್ತು ಎಂದಿದ್ದಾಳೆ.

ರೈಡ್ ಇಷ್ಟಪಟ್ಟಿರುವ ಪ್ರಿಯಾ ಇನ್ನೊಮ್ಮೆ ಇದ್ರ ಮೇಲೆ ಕುಳಿತುಕೊಳ್ತಾಳಂತೆ. ಪ್ರಿಯಾ ರೈಡ್ ವಿಡಿಯೋ ಅಭಿಮಾನಿಗಳಿಗೂ ಇಷ್ಟವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...