alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಸಂಸ್ಥಾಪಕರನ್ನೇ ಹಿಂದಿಕ್ಕಿದ್ದಾಳೆ ಪ್ರಿಯಾ ವಾರಿಯರ್

‘ಮಾಣಿಕ್ಯ ಮಲರಯ ಪೂವಿ’ ಹಾಡಿನ ಮೂಲಕ ಒಂದೇ ದಿನದಲ್ಲಿ ಇಂಟರ್ನೆಟ್ ಸ್ಟಾರ್ ಆಗಿರೋ ಮಲಯಾಳಂ ನಟಿ ಪ್ರಿಯಾ ವಾರಿಯರ್ ಈಗ ಫೇಸ್ಬುಕ್ ಸಂಸ್ಥಾಪಕನನ್ನೇ ಹಿಂದಿಕ್ಕಿದ್ದಾಳೆ. ಫೇಸ್ಬುಕ್ ಒಡೆಯ ಮಾರ್ಕ್ ಜುಕರ್ಬರ್ಗ್ ಗಿಂತ್ಲೂ ಹೆಚ್ಚು ಫಾಲೋವರ್ ಗಳನ್ನು ಸಂಪಾದಿಸಿದ್ದಾಳೆ.

ಫೇಸ್ಬುಕ್ ನಲ್ಲಿ ಜುಕರ್ಬರ್ಗ್ ಗೆ 4 ಮಿಲಿಯನ್ ಪಾಲೋವರ್ಸ್ ಇದ್ದಾರೆ. ಆದ್ರೆ ಈಗಾಗ್ಲೇ ಪ್ರಿಯಾ ಇನ್ ಸ್ಟಾಗ್ರಾಮ್ನಲ್ಲಿ 4.5 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದಾಳೆ. ಒರು ಅಡರ್ ಚಿತ್ರದ ಹಾಡಿನಲ್ಲಿ ಪ್ರಿಯಾ ಕಣ್ಣು ಹೊಡೆಯುವ ದೃಶ್ಯ ವೈರಲ್ ಆಗಿತ್ತು.

ಅದಾದ್ಮೇಲೆ ಒಂದೇ ದಿನದಲ್ಲಿ ಪ್ರಿಯಾ 6 ಲಕ್ಷ ಫಾಲೋವರ್ ಗಳನ್ನುಸಂಪಾದಿಸಿದ್ದಳು. ಈ ಹಾಡು ರಿಲೀಸ್ ಆದಾಗಿನಿಂದ ಯುಟ್ಯೂಬ್ ನಲ್ಲಿ ಸುಮಾರು 36 ಮಿಲಿಯನ್ ಜನರು ಇದನ್ನು ವೀಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣ ಯುವ ನಟಿಯ ಬದುಕನ್ನೇ ಬದಲಾಯಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...