alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಸನ್ನೆ ಬೆಡಗಿಯ ಮತ್ತೊಂದು ಹಾಡು ಹೇಗಿದೆ ಗೊತ್ತಾ…?

ಕಣ್ಸನ್ನೆಯಲ್ಲಿ ಯುವಕರಿಗೆ ಕ್ರಷ್ ಆದ ಬೆಡಗಿ ನಿಮಗೆ ನೆನಪಿರಬೇಕಲ್ವೇ. ಅದೇ ಮಲಯಾಳಂ ಚಿತ್ರರಂಗದ ತುಂಟ ಕಣ್ಣುಗಳ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್. ಮಾಣಿಕ್ಯ ಮಲರಾಯ್ ಪೂವೆ ಹಾಡಿನ ಮೂಲಕ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದ ಪ್ರಿಯಾ ಮತ್ತೆ ಒರು ಅದಾರ್ ಲವ್ ನ ಮತ್ತೊಂದು ಹಾಡಿನ ಮೂಲಕ ಈಗ ಮತ್ತೆ ವಾಪಸ್ಸಾಗಿದ್ದಾರೆ. ಆದ್ರೆ ಈ ಬಾರಿ ಪ್ರಿಯಾ ಪ್ರಕಾಶ್ ವಾರಿಯರ್ ಮೇಲೆ ಸಿನಿ ಪ್ರೇಮಿಗಳಿಗಿಂತ ಹೆಚ್ಚಾಗಿ ಟ್ರೋಲ್ ಪ್ರೇಜ್ ಗಳಿಗೆ ಸಿಕ್ಕಾಪಟ್ಟೆ ಲವ್ ಆಗಿದೆ.

ಹೌದು. ಸೆಪ್ಟೆಂಬರ್ 20 ರಂದು ಒರು ಅದಾರ್ ಲವ್ ನ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಫ್ರೀಕಿ ಪೆಣ್ಣೆ ಎಂಬ ಹಾಡು ಈಗ ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಆದ್ರೆ ಯೂಟ್ಯೂಬ್ ನಲ್ಲಿ ಸದ್ಯ ಟಾಪ್ ಟ್ರೆಂಡಿಂಗ್ ನಲ್ಲಿರೋ ಹಾಡು ಅಷ್ಟಾಗಿ ಜನರಿಗೆ ಇಷ್ಟವಾಗ್ತಿಲ್ಲ. ಪೆಪ್ಪಿ ನಂಬರ್ ನಲ್ಲಿರೋ ಹಾಡಿನ ಬಗ್ಗೆ ಬಹುತೇಕ ನೆಗೆಟೀವ್ ಕಾಮೆಂಟ್ ಗಳೇ ಕೇಳಿಬರ್ತಿವೆ.

ಆಪ್ ಸಾಂಗ್ ಆಗಿರುವ ಫ್ರೀಕಿ ಪೆಣ್ಣೆ ತನ್ನ ಗಿಬ್ರಿಷ್ ಲಿರಿಕ್ಸ್ ಹೊಂದಿದೆ. ಬಹುಶಃ ಅದೇ ಕಾರಣಕ್ಕೆ ನೆಟ್ಟಿಜನ್ಸ್ ಹಾಡನ್ನು ಇಷ್ಟಪಡ್ತಿಲ್ಲ. ಬದಲಾಗಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ಹೊಡೆಯುವ ಚಿತ್ರಪಟವನ್ನಿಟ್ಟುಕೊಂಡೇ ಟ್ರೋಲ್ ಮಾಡ್ತಿದ್ದಾರೆ. ಇಲ್ಲೀವರೆಗೂ ಹಾಡು 83ಸಾವಿರ ಲೈಕ್ಸ್ ಗಳನ್ನ ಪಡೆದಿದೆ. 48 ಸಾವಿರದ 400 ಡಿಸ್ಲೈಕ್ಸ್ ಗಳನ್ನೂ ಪಡೆದಿದೆ. ಇದೇ ವರ್ಷಾಂತ್ಯಕ್ಕೆ ಚಿತ್ರ ತೆರೆಕಾಣುವ ನಿರೀಕ್ಷೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...