alex Certify
ಕನ್ನಡ ದುನಿಯಾ       Mobile App
       

Kannada Duniya

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾಳೆ ಕಣ್ಸನ್ನೆ ಬೆಡಗಿ ಪ್ರಿಯಾ, ಏಕೆ ಗೊತ್ತಾ…?

ಕಣ್ಸನ್ನೆಯಿಂದ್ಲೇ ಓವರ್ ನೈಟ್ ಸ್ಟಾರ್ ಆಗಿದ್ದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾಳೆ. ಪ್ರಿಯಾ ನಟನೆಯ ‘ಒರು ಅಡರ್ ಲವ್’ ಚಿತ್ರದ ವಿರುದ್ಧ ದಾಖಲಾಗಿರುವ ಪ್ರಕರಣ ವಜಾ ಮಾಡುವಂತೆ ಮನವಿ ಮಾಡಿಕೊಂಡಿದ್ದಾಳೆ.

ಹೈದ್ರಾಬಾದ್ ನ ಸಂಘಟನೆಯೊಂದು ಈ ಚಿತ್ರದ ವಿರುದ್ಧ ಕೇಸ್ ದಾಖಲಿಸಿತ್ತು. ಚಿತ್ರದಲ್ಲಿರೋ ಮಾಣಿಕ್ಯ ಮಲರಯ ಪೂವಿ ಹಾಡು ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಅಂತಾ ಆರೋಪ ಮಾಡಿತ್ತು. ಚಿತ್ರದ ನಿರ್ದೇಶಕ, ನಿರ್ಮಾಪಕರು ಹಾಗೂ ನಾಯಕಿ ಪ್ರಿಯಾ ವಾರಿಯರ್ ವಿರುದ್ಧ ಕಳೆದ ವಾರ ಪ್ರಕರಣ ದಾಖಲಿಸಲಾಗಿತ್ತು.

ಆದ್ರೆ ಈ ಎಫ್ಐಆರ್ ವಜಾ ಮಾಡುವಂತೆ ಪ್ರಿಯಾ ಹಾಗೂ ‘ಒರು ಅಡರ್ ಲವ್’ ಚಿತ್ರದ ನಿರ್ದೇಶಕರು ಈಗ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದಾರೆ. ಮಾಣಿಕ್ಯ ಮಲರಯ ಹಾಡಿನ ಮೂಲಕವೇ ಪ್ರಿಯಾ ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾಳೆ. ಈ ಹಾಡಿನಲ್ಲಿ ಪ್ರಿಯಾ ಕಣ್ಣು ಹೊಡೆಯುವ ದೃಶ್ಯ ಭಾರೀ ಜನಪ್ರಿಯವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...