alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾ ಪ್ರಕಾಶ್ ಬಗ್ಗೆ ಆಶ್ಚರ್ಯಕರ ಮಾಹಿತಿ ಬಿಚ್ಚಿಟ್ಟ ತಾಯಿ

ರಾತ್ರೋ ರಾತ್ರಿ ಮನೆ ಮಾತಾದವಳು ಪ್ರಿಯಾ ಪ್ರಕಾಶ್ ವಾರಿಯರ್. ಮಲಯಾಳಂ ನಟಿ ಪ್ರಿಯಾ ಮೊದಲ ಚಿತ್ರದ ಹಾಡೊಂದರ ತುಣುಕಿನಲ್ಲೇ ಎಲ್ಲರ ಗಮನ ಸೆಳೆದಿದ್ದಾಳೆ. ಪ್ರಿಯಾ ಪ್ರಕಾಶ್ ಇನ್ಸ್ಟ್ರಾಗ್ರಾಮ್ ನಲ್ಲಿ ಜಗತ್ತಿನ ಮೂರನೇ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಪ್ರಿಯಾ ಖ್ಯಾತಿ ಆಕೆ ಮನೆಯವರಿಗೆ ಖುಷಿ ನೀಡಿಲ್ಲ. ಪ್ರಿಯಾ ತಾಯಿ ಮಗಳ ಖ್ಯಾತಿ ಬಗ್ಗೆ ಮಾತನಾಡಿದ್ದಾರೆ.

ವೆಬ್ಸೈಟ್ ಒಂದರ ಜೊತೆ ಮಾತನಾಡಿದ ಪ್ರಿಯಾ ಪ್ರಕಾಶ್ ತಾಯಿ ಪ್ರೀತಿ ಮಗಳನ್ನು ಹಾಸ್ಟೆಲ್ ಗೆ ಕಳುಹಿಸಿರುವುದಾಗಿ ಹೇಳಿದ್ದಾರೆ. ಒಂದೇ ಬಾರಿ ಇಷ್ಟೊಂದು ಪ್ರಚಾರ ಸಿಕ್ಕಿರುವುದು ಟೆನ್ಷನ್ ಗೆ ಕಾರಣವಾಗಿದೆಯಂತೆ. ಹಾಗಾಗಿ ಪ್ರಿಯಾಳನ್ನು ಹಾಸ್ಟೆಲ್ ಗೆ ಕಳುಹಿಸಿದ್ದಾರಂತೆ.

ಪ್ರಿಯಾ ಅಭಿನಯಿಸುತ್ತಿರುವ ಚಿತ್ರ ಬಿಡುಗಡೆಯಾಗುವವರೆಗೂ ಯಾವುದೇ ಪ್ರತಿಕ್ರಿಯೆ ನೀಡಬಾರದೆಂದು ನಿರ್ದೇಶಕರು ಹೇಳಿದ್ದಾರಂತೆ. ಚಿತ್ರದ ಶೂಟಿಂಗ್ ಈಗಷ್ಟೇ ಶುರುವಾಗಿದೆಯಂತೆ. ಇನ್ನೂ ಕೆಲವೇ ಕೆಲವು ದೃಶ್ಯಗಳು ಚಿತ್ರೀಕರಣಗೊಂಡಿವೆಯಂತೆ. ಹಿಂದಿನ ವರ್ಷ ಪ್ರಿಯಾ 12ನೇ ತರಗತಿಯಲ್ಲಿರುವ ವೇಳೆ ಆಡಿಷನ್ ನೀಡಿದ್ದಳಂತೆ. ಮೊದಲ ಪ್ರಯತ್ನದಲ್ಲಿಯೇ ಪ್ರಿಯಾ ಸೈ ಎನಿಸಿಕೊಂಡಿದ್ದಳಂತೆ.

ಪ್ರಿಯಾಳ ಯಾವುದೇ ಅಧಿಕೃತ ಇನ್ಸ್ಟ್ರಾಗ್ರಾಮ್ ಅಕೌಂಟ್ ಇಲ್ಲವಂತೆ. ಸಾಮಾಜಿಕ ಜಾಲತಾಣದಲ್ಲಿರುವ ಪ್ರಿಯಾಳ ಎಲ್ಲ ಅಕೌಂಟ್ ನಕಲಿಯಂತೆ. ಈವರೆಗೆ ಒಂದು ರ್ಯಾಂಪ್ ವಾಕ್ ಹಾಗೂ ಒಂದು ಫೋಟೋಶೂಟ್ ಮಾಡಿಸಿದ್ದಾಳಂತೆ ಪ್ರಿಯಾ. ಫೋಟೋಶೂಟ್ ನಲ್ಲಿ ತೆಗೆಸಿದ ಫೋಟೋವನ್ನೂ ಪ್ರಿಯಾ ಪಡೆದಿರಲಿಲ್ಲವಂತೆ. ಫೋಟೋಶೂಟ್ ಮಾಡಿದ್ದ ಛಾಯಾಗ್ರಾಹಕನೇ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾ ಫೋಟೋ ಪೋಸ್ಟ್ ಮಾಡಿದ್ದಾನಂತೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...