alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈನಲ್ಲಿ ಸಹ ನಟ ಅಬ್ದುಲ್ ಜೊತೆ ಪ್ರಿಯಾ ಪ್ರಕಾಶ್

ದೇಶದ ವಿಂಕ್ ಗರ್ಲ್ ಅಂದ್ರೆ ಪ್ರಿಯಾ ಪ್ರಕಾಶ್ ವಿಡಿಯೋವೊಂದು ವೈರಲ್ ಆಗಿದೆ. ಪ್ರಿಯಾ ಪ್ರಕಾಶ್ ‘ಒರು ಅದರ್ ಲವ್’ ಚಿತ್ರದ ಸಹ ನಟ ರೋಷನ್ ಅಬ್ದುಲ್ಲಾ ಜೊತೆ ಕಾಣಿಸಿಕೊಂಡಿದ್ದಾಳೆ. ದುಬೈ ಭೇಟಿ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರಿಯಾ ಉತ್ತರ ನೀಡ್ತಿರುವ ವಿಡಿಯೋ ಇದಾಗಿದೆ.

ವಿಡಿಯೋದಲ್ಲಿ ದುಬೈ ಅನುಭವವನ್ನು ಪ್ರಿಯಾ ಹಾಗೂ ಅಬ್ದುಲ್ ಹಂಚಿಕೊಂಡಿದ್ದಾರೆ. ಇಬ್ಬರೂ ಈ ಅನುಭವ ಹೊಸದು ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾತ್ರೋ ರಾತ್ರಿ ಸುದ್ದಿಗೆ ಬಂದಿದ್ದ ಪ್ರಿಯಾ ಮೇಲೆ ಈಗ ಮಾಧ್ಯಮಗಳ ಕಣ್ಣಿದೆ. ಪ್ರಿಯಾ ಏನೇ ಮಾಡಿದ್ರೂ ಸುದ್ದಿಗೆ ಬರ್ತಾಳೆ. ಸದ್ಯ ಪ್ರಿಯಾ ಹಾಗೂ ಸಹ ನಟ ಅಬ್ದುಲ್ ದುಬೈನಲ್ಲಿದ್ದಾರೆ. ಅಲ್ಲಿನ ಮಾಧ್ಯಮಗಳು ದುಬೈ ಹೇಗಿದೆ? ಹೊಟೇಲ್ ಹೇಗಿದೆ? ಎಂಬೆಲ್ಲ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಪ್ರಿಯಾ ಉತ್ತರ ನೀಡಿದ್ದಾಳೆ.

ಕಣ್ಣು ಹೊಡೆದು ಕೋಟ್ಯಾಂತರ ಜನರ ಮನ ಗೆದ್ದಿದ್ದ ಪ್ರಿಯಾಳ ಮೊದಲ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಹಾಡೊಂದರ ಮೂಲಕವೇ ಇಷ್ಟು ಸುದ್ದಿಗೆ ಬಂದಿರುವ ನಟಿ ಸಿನಿಮಾ ತೆರೆ ಮೇಲೆ ಬಂದ್ರೆ ಅದೆಷ್ಟು ಸುದ್ದಿಯಾಗ್ತಾಳೆ ಎಂಬುದನ್ನು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...