alex Certify
ಕನ್ನಡ ದುನಿಯಾ       Mobile App
       

Kannada Duniya

ಕರೀನಾ ಕಪೂರ್ ರನ್ನು ಪ್ರಿಯಾಮಣಿ ಭೇಟಿಯಾದಾಗ..

priya-mani-hangs-out-with-kareena

ಕನ್ನಡ, ತೆಲುಗು, ಹಿಂದಿ, ತಮಿಳು ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಪ್ರಿಯಾಮಣಿ, ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ನಟಿ. ಅವರು ಪ್ರವಾಸಕ್ಕೆಂದು ಮಸ್ಕತ್ ಗೆ ಹೋಗಿದ್ದ ಸಂದರ್ಭದಲ್ಲಿ ವಿಶೇಷ ಘಟನೆಯೊಂದು ನಡೆದಿದೆ.

ಮಸ್ಕತ್ ಪ್ರವಾಸಕ್ಕೆ ಹೋಗಿದ್ದ ಪ್ರಿಯಾಮಣಿ ಶಾಪಿಂಗ್ ಮಾಡಲು ಅಲ್ಲಿನ ಪ್ರಮುಖ ಸ್ಥಳ ಒಂದಕ್ಕೆ ಹೋಗಿದ್ದು, ಈ ಸಂದರ್ಭದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಎದುರಾಗಿದ್ದಾರೆ. ಕರೀನಾ ಕಪೂರ್ ಕೂಡ, ಶಾಪಿಂಗ್ ಮಾಡಲು ಅಲ್ಲಿಗೆ ಬಂದಿದ್ದರು. ಅವರನ್ನು ನೋಡಿದ್ದೇ ತಡ ಪ್ರಿಯಾಮಣಿ ಖುಷಿ ಹೆಚ್ಚಾಗಿದ್ದು, ಈ ಖುಷಿಯಲ್ಲಿಯೇ ಕರೀನಾರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ತಾನು ಕರೀನಾ ಕಪೂರ್ ಅಭಿಮಾನಿಯಾಗಿದ್ದು, ಅವರೆಂದರೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ.

ಹೀಗೆ ಕರೀನಾರೊಂದಿಗೆ ತೆಗೆಸಿಕೊಂಡ ಫೋಟೋವನ್ನು ಪ್ರಿಯಾಮಣಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ನನ್ನ ಫೇವರಿಟ್ ನಟಿಯೊಂದಿಗೆ ಕೆಲಕ್ಷಣ ಕಳೆದೆ ಎಂದು ಹೇಳಿಕೊಂಡಿದ್ದಾರೆ. ಪ್ರಿಯಾಮಣಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರೊಂದಿಗೂ ಅಭಿನಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...