alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಿಂದ ಪೃಥ್ವಿ ಹೊರ ಬಂದ ಬಳಿಕ ಆಗಿದ್ದೇನು ಗೊತ್ತಾ…?

‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದ ಆರ್.ಜೆ. ಪೃಥ್ವಿ ಮನೆಯಿಂದ ಹೊರ ಬಂದಿದ್ದಾರೆ.  ಈ ವಾರ ನಾಮಿನೇಟ್ ಆಗಿದ್ದ ಸದಸ್ಯರೆಲ್ಲ ಸೇಫ್ ಆಗಿದ್ದು ಪೃಥ್ವಿ ಮನೆಯಿಂದ ಹೊರ ಬಂದಿದ್ದಾರೆ.

ಅವರು ಹೊರಬಂದ ಬಳಿಕ ಮನೆಯಲ್ಲಿ ಪ್ರಿಯಾಂಕಾ ಮತ್ತು ರಕ್ಷಾ ಕಣ್ಣೀರಿಟ್ಟಿದ್ದಾರೆ. ಪೃಥ್ವಿ ಜೊತೆಗೆ ಆತ್ಮೀಯವಾಗಿದ್ದ ಪ್ರಿಯಾಂಕಾ ಅತ್ತಾಗ ಅನೇಕ ಸದಸ್ಯರು ಸಮಾಧಾನ ಮಾಡಿದ್ದಾರೆ. ಅದೇ ರೀತಿ ರಕ್ಷಾ ಅವರನ್ನು ಸಮಾಧಾನ ಪಡಿಸಿದ್ದಾರೆ.

ಅಂದ ಹಾಗೆ ಹೊರಬಂದ ಪೃಥ್ವಿ ಒಂದು ಲಕ್ಷಕ್ಕೂ ಅಧಿಕ ಓಟ್ ಪಡೆದುಕೊಂಡಿದ್ದಾರೆ. 1 ಲಕ್ಷಕ್ಕೂ ಅಧಿಕ ಓಟ್ ಬಿದ್ದಿದ್ದರೂ ಮನೆಯಿಂದ ಹೊರ ಬಂದಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ. ಹೊರಬಂದ ಪೃಥ್ವಿಗೆ ಒಂದು ಲಕ್ಷಕ್ಕೂ ಅಧಿಕ ವೋಟುಗಳು ಬಿದ್ದಿವೆ ಎಂದರೆ ಸೇಫ್ ಆದ ಸ್ಪರ್ಧಿಗಳಿಗೆ ಎಷ್ಟು ಲಕ್ಷ ವೋಟ್ ಬಿದ್ದಿರಬಹುದು ಎಂಬುದನ್ನು ಊಹಿಸಿ ಎಂದು ಸುದೀಪ್ ತಿಳಿಸಿದ್ದಾರೆ. ಅಭಿಮಾನಿಗಳಿಗೆ ನಿರಾಸೆ ಮಾಡದೆ ನಿಮ್ಮ ಆಟವನ್ನು ನೀವು ಆಡಿ ಎಂದು ಕಿವಿಮಾತು ಹೇಳಿದ್ದಾರೆ.

ಮನೆಯಿಂದ ಹೊರಬಂದ ನಂತರ ಸುದೀಪ್ ಬಳಿ  ವೇದಿಕೆಯಲ್ಲಿ ‘ಬಿಗ್ ಬಾಸ್’ ಜರ್ನಿ ಬಗ್ಗೆ ಹೇಳಿಕೊಂಡ ಪೃಥ್ವಿ ಊಟ-ತಿಂಡಿ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತಿದ್ದು ಅದನ್ನು ಹೊರತುಪಡಿಸಿ ಯಾವುದೇ ಸವಾಲ್ ಅನಿಸಲಿಲ್ಲ. ಅನೇಕ ಸದಸ್ಯರು ಆತ್ಮೀಯವಾಗಿ ಇದ್ದರು. ನಾನು ಬರುವಾಗ ಅವರು ಅತ್ತಿದ್ದನ್ನು ಕಂಡು ಭಾವುಕನಾದೆ. ವಾಸುಕಿ ವೈಭವ್, ಶೈನ್ ಶೆಟ್ಟಿ, ಕುರಿ ಪ್ರತಾಪ್ ಫಿನಾಲೆಗೆ ಬರಬಹುದು ಎಂದು ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...