alex Certify
ಕನ್ನಡ ದುನಿಯಾ       Mobile App
       

Kannada Duniya

ನೆಸ್ ವಾಡಿಯಾ ವಿರುದ್ದ ದೂರು ದಾಖಲಿಸಿದ್ದ ಪ್ರೀತಿ ಜಿಂಟಾಗೆ ಶಾಕ್

ನಟಿ ಪ್ರೀತಿ ಜಿಂಟಾ ಅವರು ಉದ್ಯಮಿ ನೆಸ್ ವಾಡಿಯಾ ವಿರುದ್ಧ 2014 ರಲ್ಲಿ ದಾಖಲಿಸಿದ್ದ ಕಿರುಕುಳ ಕೇಸನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ. ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಪರಿಗಣಿಸುವಂತೆ ನಟಿಗೆ ಕೋರ್ಟ್ ಸಲಹೆ ನೀಡಿದ ಎರಡು ದಿನಗಳಲ್ಲೇ ಕೋರ್ಟ್ ಪ್ರಕರಣವನ್ನು ರದ್ದುಗೊಳಿಸಲು ನಿರ್ಧರಿಸಿದೆ.

ಪ್ರಕರಣ ಕೈಬಿಡಬೇಕೆಂದು ಕೋರಿ ವಾಡಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್, ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಳಿಸಿ ಎಂದು ಇಬ್ಬರಿಗೂ ಹೇಳಿತ್ತು. ನೆಸ್ ವಾಡಿಯಾ ಕ್ಷಮೆ ಕೇಳಲು ಸಿದ್ಧರಿದ್ದರೆ, ನಟಿ ವಿಷಯ ಇತ್ಯರ್ಥಗೊಳಿಸಲು ಸಿದ್ಧರಿದ್ದಾರೆ ಎಂದು ಪ್ರೀತಿ ಪರ ವಕೀಲರು ಕೋರ್ಟ್‌ಗೆ ಹೇಳಿದ್ದರು. ಆದರೆ ಉದ್ಯಮಿ ವಾಡಿಯಾ ಕ್ಷಮೆ ಕೇಳಲು ಸಿದ್ಧರಿಲ್ಲ ಎಂದು ಅವರ ಪರ ವಕೀಲರು ಕೋರ್ಟ್‌ಗೆ ತಿಳಿಸಿದ್ದರು.

ಪ್ರೀತಿ ದೂರಿನ ಪ್ರಕಾರ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯದ ವೇಳೆ 2014 ರ ಮೇ 30ರಂದು ಘಟನೆ ನಡೆದಿತ್ತು. ಪ್ರೀತಿ ಹಾಗೂ ನೆಸ್ ವಾಡಿಯಾ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕರಾಗಿದ್ದರು. ಟಿಕೆಟ್ ಹಂಚಿಕೆ ಸಂಬಂಧ ನೆಸ್ ತಂಡದ ಸಿಬ್ಬಂದಿಗೆ ನಿಂದಿಸಿದ್ದಾರೆ. ಆಗ ತಾನು ಕೋಪಿಸಿಕೊಳ್ಳದಂತೆ ಹೇಳಿದೆ. ಆದರೆ ತನ್ನ ವಿರುದ್ಧವೇ ಬೈದಾಡಿದ ನೆಸ್ ತನ್ನ ತೋಳನ್ನು ಹಿಡಿದು ಎಳೆದಾಡಿದರು ಎಂದು ಪ್ರೀತಿ ಜಿಂಟಾ ದೂರಿನಲ್ಲಿ ಹೇಳಿದ್ದರು. ಈ ದೂರನ್ನಾಧರಿಸಿ ಪೊಲೀಸರು ವಾಡಿಯಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ಇದಾದ ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ನೆಸ್, ಪ್ರಕರಣ ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ವೈಯಕ್ತಿಕ ಸೇಡಿನಿಂದ ಈ ಪ್ರಕರಣ ದಾಖಲಿಸಲಾಗಿದೆ. ಆ ಘಟನೆ ತಪ್ಪು ತಿಳುವಳಿಕೆಯಿಂದಾಗಿತ್ತಷ್ಟೆ ಎಂದು ಹೇಳಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...