alex Certify
ಕನ್ನಡ ದುನಿಯಾ       Mobile App
       

Kannada Duniya

ಆಕ್ಷೇಪಿಸಿದವನಿಗೆ ಖಡಕ್ ಉತ್ತರ ನೀಡಿದ್ದಾಳೆ ಈ ನಟಿ

ಇತ್ತೀಚೆಗಷ್ಟೆ ನಟಿ ಶಿಲ್ಪಾ ಶೆಟ್ಟಿ ದುಬೈನ ಮಿಲಿಯನೇರ್ ಒಬ್ಬರ ಪರ್ಸನಲ್ ಝೂಗೆ ಭೇಟಿ ನೀಡಿದ್ರು. ಈಗ ಪ್ರೀತಿ ಝಿಂಟಾ ಕೂಡ ಅಂಥದ್ದೇ ಕಾರಣಕ್ಕೆ ಸಾಮಾಜಿಕ ತಾಣಗಳಲ್ಲಿ ವಿವಾದಕ್ಕೆ ಗ್ರಾಸವಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಸಿಂಹದ ಮರಿಯೊಂದನ್ನು ನೇವರಿಸ್ತಾ ಇರೋ ಫೋಟೋವನ್ನು ಇನ್ ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಹೊಸ ಸ್ನೇಹಿತರು ಸಿಕ್ಕಂತಾಗಿದೆ, ನಿಜಕ್ಕೂ ಇದೊಂದು ವಿಸ್ಮಯ ಅಂತಾ ಪೋಸ್ಟ್ ಮಾಡಿದ್ದಾರೆ. ಆದ್ರೆ ವ್ಯಕ್ತಿಯೊಬ್ಬ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ನಿಮಗೆ ಇದು ಅದ್ಭುತ ಅನುಭವವಿರಬಹುದು, ಆದ್ರೆ ಆ ಸಿಂಹದ ಮರಿಗಲ್ಲ. ಬಹುಷಃ ಸಿಂಹದ ಮರಿಗೆ ಡ್ರಗ್ಸ್ ಕೊಡಲಾಗಿದೆ ಅಂತಾ ಪ್ರತಿಕ್ರಿಯಿಸಿದ್ದಾನೆ.

ಟ್ರೋಲ್ ಗೆ ಹೆದರಿ ಶಿಲ್ಪಾ ಶೆಟ್ಟಿ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ರು. ಆದ್ರೆ ಪ್ರೀತಿ ಮಾತ್ರ ತಿರುಗೇಟು ಕೊಟ್ಟಿದ್ದಾರೆ. ಸಿಂಹದ ಮರಿಗೆ ಡ್ರಗ್ಸ್ ಕೊಟ್ಟಿಲ್ಲ, ಬಿಸಿಲಿಗೆ ಬಳಲಿ ನಿದ್ದೆ ಹೋಗಿದೆ ಅಷ್ಟೆ. ಜೀವನದಲ್ಲಿ ಎಲ್ಲದಕ್ಕೂ ವಿವಾದವನ್ನು ಎಳೆದು ತರಲೇಬೇಕೆಂಬ ಅಗತ್ಯವಿಲ್ಲ ಅಂತಾ ಖಡಕ್ಕಾಗೇ ಪ್ರೀತಿ ರಿಯಾಕ್ಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...