alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯದಲ್ಲಿಯೇ ಮದುವೆಯಾಗ್ತಾರಂತೆ ಪ್ರೀತಿ ಜಿಂಟಾ

preity-zinta-marriage-story_647_022216120951

ಕ್ರಿಕೆಟಿಗ ಯುವರಾಜ್ ಸಿಂಗ್ ಜತೆ ಆಗಾಗ ಕಾಣಿಸಿಕೊಳ್ಳುವ ಮೂಲಕ ಕುತೂಹಲಕ್ಕೆ ಕಾರಣವಾಗಿದ್ದ ಬಾಲಿವುಡ್ ಬೆಡಗಿ ಪ್ರೀತಿ ಜಿಂಟಾ ಸದ್ಯದಲ್ಲಿಯೇ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಬಲ್ಲ ಮೂಲಗಳ ಪ್ರಕಾರ ಪ್ರೀತಿ ಜಿಂಟಾ ಏಪ್ರಿಲ್ ನಲ್ಲಿ ತನ್ನ ಅಮೆರಿಕ ಗೆಳೆಯ ಜೀನಿ ಗುಡ್ ಎನಫ್ ಜೊತೆಗೆ ಹಸೆಮಣೆ ಏರಲಿದ್ದು, ಈಗಾಗಲೇ ಇದಕ್ಕೆ ಸಂಬಂಧಿಸಿದ ಪೂರ್ವ ತಯಾರಿ ಸದ್ದಿಲ್ಲದೇ ಸಾಗಿದೆ ಎನ್ನಲಾಗುತ್ತಿದೆ. ಆರ್ಥಿಕ ಸಲಹೆಗಾರರಾಗಿರುವ ಜೀನಿ ಗುಡ್ ಎನಫ್ ಜತೆ ಪ್ರೀತಿ ಜಿಂಟಾ ವಿವಾಹ ಕ್ರೈಸ್ತ ಸಂಪ್ರದಾಯದಂತೆ ಲಾಸ್ ಏಂಜಲೀಸ್‍ನಲ್ಲಿ ನಡೆಯಲಿದೆ ಎನ್ನಲಾಗಿದ್ದು, ಅನಂತರ ಮುಂಬೈನಲ್ಲಿ ಚಿತ್ರರಂಗದ ಸ್ನೇಹಿತರನ್ನು ಆಹ್ವಾನಿಸಿ ರಜಪೂತ್ ಸಂಪ್ರದಾಯದಂತೆ ಮೆಹೆಂದಿ, ಸಂಗೀತ್ ಮತ್ತು ಇತರೆ ಶಾಸ್ತ್ರಗಳು ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಶೇಷವೆಂದರೆ ಈ ಮದುವೆ ಕಾರ್ಯಕ್ರಮ ರಹಸ್ಯವಾಗಿ ನಡೆಯಲಿದ್ದು, ಪ್ರೀತಿ ಜಿಂಟಾ ಹಾಗೂ ಜೀನಿ ಅವರ ಕುಟುಂಬದವರು ಮತ್ತು ಆಪ್ತ ವರ್ಗದವರು ಮಾತ್ರ ಭಾಗಿಯಾಗಲಿದ್ದಾರಂತೆ. ಏನೇ ಇರಲಿ, ಯುವರಾಜ್ ಜತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದ ಈ ಗುಳಿಕೆನ್ನೆಯ ಹುಡುಗಿಯ ಮದುವೆ ನಿಶ್ಚಯವಾಗಿದ್ದು ಹಲವು ಅನುಮಾನಗಳನ್ನು ದೂರ ಮಾಡಿದ್ದಂತೂ ಸತ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...