alex Certify
ಕನ್ನಡ ದುನಿಯಾ       Mobile App
       

Kannada Duniya

ಸೀಮಂತದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ನಟಿ

ಬಹುಭಾಷಾ ನಟಿ ರಂಭಾ ತಮ್ಮ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬ್ಯುಸಿನೆಸ್ ಮ್ಯಾನ್ ಇಂದ್ರಕುಮಾರ್ ಪದ್ಮನಾಭನ್ ಅವರನ್ನು ಮದುವೆಯಾಗಿ ಟೊರಾಂಟೋದಲ್ಲಿ ನೆಲೆಸಿರುವ ದಂಪತಿಗೆ ಲಾನ್ಯಾ ಮತ್ತು ಸಶಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಈಗ ಮೂರನೇ ಮಗುವಿನ ನಿರೀಕ್ಷೆಯಲ್ಲಿರುವ ತುಂಬು ಗರ್ಭಿಣಿ ರಂಭಾಗೆ ಇತ್ತೀಚೆಗಷ್ಟೇ ಸೀಮಂತ ಕಾರ್ಯ ನೆರವೇರಿದೆ.

ಈ ಸಂಭ್ರಮದಲ್ಲಿ ಬಂಧು ಬಳಗದವರೊಂದಿಗೆ ರಂಭಾ ಸಖತ್ತಾಗಿಯೇ ಹಾಡಿ ಕುಣಿದಿದ್ದಾರೆ. 40 ವರ್ಷದ ನಟಿ ತಮ್ಮ ಇನ್ಸ್ಟಾಗ್ರಾಮ ಖಾತೆಯ ಮೂಲಕ ತಮ್ಮ ಸೀಮಂತ ಸಮಾರಂಭದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಫೋಟೋಗಳಿಗೆ ಈಗ ರಂಭಾ ಅಭಿಮಾನಿಗಳಿಂದ, ಸ್ನೇಹಿತರ ವರ್ಗದಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಸಮಾರಂಭದಲ್ಲಿ ರಂಭಾ ನೃತ್ಯ ಮಾಡ್ತಿರೋ ಫೋಟೋಗಳನ್ನ ನೆಟ್ಟಿಗರು ತುಂಬಾ ಇಷ್ಟಪಡುತ್ತಿದ್ದಾರೆ. ರಂಭಾ ಹಿಂದೆಂದು ಇಷ್ಟು ಖುಷಿಯಾಗಿ ಇರೋದನ್ನ ಖಂಡಿತ ನೀವು ನೋಡಿರೋದಕ್ಕೆ ಸಾಧ್ಯವಿಲ್ಲ ಅನ್ನೋ ಮೆಚ್ಚುಗೆಗಳು ಫೋಟೋಗಳಿಗೆ ಸಿಗ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...