alex Certify
ಕನ್ನಡ ದುನಿಯಾ       Mobile App
       

Kannada Duniya

ಮೀರಾ ಬೇಬಿ ಬಂಪ್ ನೋಡಿ ದಿನ ಹೀಗೆ ವಿಶ್ ಮಾಡ್ತಾಳಂತೆ ಮಗಳು….

ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಎರಡನೇ ಮಗುವಿನ ಸ್ವಾಗತಕ್ಕೆ ಸಿದ್ಧರಾಗ್ತಿದ್ದಾರೆ. ಎರಡನೇ ಬಾರಿ ತಾಯಿಯಾಗ್ತಿರುವ ಮೀರಾ ಅನೇಕ ವಿಷ್ಯಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇನ್ನೊಂದು ಮಗು ಬರ್ತಿದೆ ಎಂಬ ಸುದ್ದಿ ಕೇಳಿ ಮಗಳು ಮಿಶಾ ಸಂತೋಷವಾಗಿದ್ದಾಳೆಂದು ಮೀರಾ ಹೇಳಿದ್ದಾರೆ.

ಮಿಶಾ ನನ್ನ ಹೊಟ್ಟೆಯಲ್ಲಿ ಮಗುವಿದೆ ಎಂಬುದನ್ನು ತಿಳಿದಿದ್ದಾಳೆ. ನನ್ನ ಹೊಟ್ಟೆ ನೋಡುವುದು ಆಕೆಗೆ ಖುಷಿ ವಿಚಾರ. ಹೊಟ್ಟೆ ಮುಟ್ಟಿ ಹಾಯ್ ಬೇಬಿ ಎನ್ನುತ್ತಾಳೆ ಮಿಶಾ ಎಂದು 23 ವರ್ಷದ ಮೀರಾ ಹೇಳಿದ್ದಾರೆ. ಶೀಘ್ರದಲ್ಲಿಯೇ ಎರಡನೇ ಮಗು ಪಡೆಯುವ ಪ್ಲಾನ್ ಮಾಡಿದ್ದು ಮೀರಾ  ಅಂತೆ. ಈ ವಿಷ್ಯವನ್ನು ಸಂದರ್ಶನವೊಂದರಲ್ಲಿ ಶಾಹಿದ್ ಹೇಳಿದ್ದಾರೆ.

ಎರಡು ಮಕ್ಕಳ ನಂತ್ರ ಬಾಲಿವುಡ್ ಗೆ ಬರಬೇಕಾ? ಬೇಡ್ವಾ ಎಂಬ ನಿರ್ಧಾರಕ್ಕೆ ಮೀರಾ ಬರಲಿದ್ದಾರಂತೆ. ಜಾಹೀರಾತಿನ ಮೂಲಕ ಈಗಾಗಲೇ ನಟನೆಗೆ ಮೀರಾ ಕಾಲಿಟ್ಟಿದ್ದಾರೆ. ಈ ಜಾಹಿರಾತಿನಲ್ಲಿ ಮೀರಾ ಬೇಬಿ ಬಂಪ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...