alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಪ್ರತ್ಯುಷಾ ಬ್ಯಾನರ್ಜಿ ಬಗ್ಗೆ ಶಾಕಿಂಗ್ ನ್ಯೂಸ್ ನೀಡಿದ ಕೆಲಸದಾಕೆ

pratyushabanerjee

‘ಬಾಲಿಕಾ ವಧು’ ಧಾರವಾಹಿಯ ಪ್ರಸಿದ್ಧ ನಟಿ ಪ್ರತ್ಯುಷಾ ಬ್ಯಾನರ್ಜಿ ಆತ್ಮಹತ್ಯೆ ನಂತರ ಒಂದೊಂದೆ ಶಾಕಿಂಗ್ ಸುದ್ದಿಗಳು ಹೊರ ಬರ್ತಾ ಇವೆ. ಹಿರಿತೆರೆ ಹಾಗು ಕಿರುತೆರೆ ಎರಡಕ್ಕೂ ಶಾಕ್ ಕೊಟ್ಟಿರುವ ಪ್ರತ್ಯುಷಾ ಆತ್ಮಹತ್ಯೆ ವಿಚಾರ ಬಹಳ ಚರ್ಚೆಯಲ್ಲಿದೆ.

ಈಗ ಪ್ರತ್ಯುಷಾ ಕೆಲಸದಾಕೆ ರೇಣು ಸಿನ್ಹಾ ಸಂದರ್ಶನವೊಂದರಲ್ಲಿ ಎಲ್ಲರೂ ಆಶ್ಚರ್ಯಗೊಳ್ಳುವಂತಹ ವಿಷಯ ಬಾಯ್ಬಿಟ್ಟಿದ್ದಾಳೆ. ಪ್ರತ್ಯುಷಾ ಬಳಿ ಬಹಳ ಹಣವಿತ್ತಂತೆ. ಆದ್ರೂ ಸಣ್ಣ ಪುಟ್ಟ ಕೆಲಸಕ್ಕೂ ಆಕೆ ಕೆಲಸದಾಕೆ ಬಳಿ ಹಣ ಕೇಳುತ್ತಿದ್ದಳಂತೆ. ಆಕೆ ಎಟಿಎಂ, ಕ್ರೆಡಿಡ್ ಕಾರ್ಡ್ ಎಲ್ಲ ಪ್ರತ್ಯುಷಾ ಬಾಯ್ ಫ್ರೆಂಡ್ ಬಳಿ ಇತ್ತಂತೆ.

ಪ್ರತ್ಯುಷಾ ಹಾಗೂ ಬಾಯ್ ಫ್ರೆಂಡ್ ರಾಹುಲ್ ನಡುವೆ ಯಾವಾಗಲೂ ಜಗಳವಾಗ್ತಾ ಇತ್ತಂತೆ. ಇದೇ ಕಾರಣಕ್ಕೆ ಪ್ರತ್ಯುಷಾ ತಾಯಿ ಕೂಡ ಮುಂಬೈ ಬಿಟ್ಟಿದ್ದರಂತೆ. ರಾಹುಲ್ ಮೇಲೆ ಕಣ್ಣಿಡುವಂತೆ ರೇಣುಗೆ ಹೇಳಿ ಹೋಗಿದ್ದರಂತೆ. ಪ್ರತ್ಯುಷಾ ಸಣ್ಣ ಊರಿನ ಮಧ್ಯಮ ವರ್ಗದ ಮನೆಯಿಂದ ಬಂದವಳು. ಹಾಗಾಗಿ ರಾಹುಲ್ ಜೊತೆಗಿನ ಸಂಬಂಧ ಮುರಿದುಕೊಳ್ಳಲು ಹೆದರುತ್ತಿದ್ದಳು. ಇದು ತನ್ನ ವೃತ್ತಿ ಮೇಲೆ ಪರಿಣಾಮ ಬೀರಬಹುದೆಂಬ ಭಯ ಆಕೆಗಿತ್ತು. ಆತನನ್ನು ಬಿಡದಿರಲು ಇನ್ನೂ ಬಲವಾದ ಯಾವುದೋ ಕಾರಣ ಇತ್ತು ಎಂದಿದ್ದಾಳೆ ರೇಣು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...