alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’: ಸಂಜನಾ, ಶಾಲಿನಿಗೆ ಶಿಕ್ಷೆ ಕೊಟ್ಟ ಸರ್ವಾಧಿಕಾರಿ ಪ್ರಥಮ್

pratham-nir

‘ಬಿಗ್ ಬಾಸ್’ನಲ್ಲಿ ಎಮರ್ಜೆನ್ಸಿ ಘೋಷಿಸಿದ್ದು, ನಾಯಕನಿಲ್ಲದ ಮನೆಯ ದಂಡನಾಯಕನಾಗಿರುವ ಪ್ರಥಮ್ ಸದಸ್ಯರ ಮೇಲೆ ಸವಾರಿ ಮಾಡತೊಡಗಿದ್ದಾರೆ. ಪ್ರಥಮ್ ಬಿಗಿ ಹಿಡಿತಕ್ಕೆ ಸದಸ್ಯರು ನಲುಗಿದ್ದು, ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಅಲ್ಲದೇ, ಮನೆ ಕೂಡ ಕ್ಲೀನ್ ಆಗಿದ್ದು, ನಾಯಕನಾಗಿ ಪ್ರಥಮ್ ಸಖತ್ತಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಕೀರ್ತಿ ಹೇಳಿದ್ದಾರೆ.

ನಿರಂಜನ್, ಭುವನ್, ಮೋಹನ್ ಹಾಗೂ ಕೀರ್ತಿ ಮಾತನಾಡುವ ಸಂದರ್ಭದಲ್ಲಿ ಪ್ರಥಮ್ ನಾಯಕತ್ವದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದವು. ದಂಡ ನಾಯಕನಾಗಿ ಪ್ರಥಮ್ ಸದಸ್ಯರಿಗೆ ಶಿಕ್ಷೆಯನ್ನು ವಿಧಿಸಿದ್ದಾರೆ. ಸಕ್ಕರೆ ಇಲ್ಲದೇ ಟೀ ಕುಡಿಯುವಂತೆ ಮಾಡಿದ್ದಾರೆ. ನ್ಯಾಯ ಪಾಲಕಿ ಮಾಳವಿಕಾ ಹಾಗೂ ಕಮಾಂಡೋಗಳಾದ ರೇಖಾ ಮತ್ತು ಶಾಲಿನಿ ಅವರಿಗೆ ತಮ್ಮ ಆದೇಶಗಳನ್ನು ಎಲ್ಲರೂ ಸರಿಯಾಗಿ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಿ ಎಂದು ಹೇಳಿದ್ದಾರೆ.

ಭುವನ್ ಮತ್ತು ಸಂಜನಾ ಬಾತ್ ರೂಂನಲ್ಲಿ ಒಟ್ಟಿಗೆ ಇರುವಂತಿಲ್ಲ. ಅಣ್ಣ, ತಂಗಿ ಎಂದೇ ಅವರು ಮಾತನಾಡಿಕೊಳ್ಳಬೇಕೆಂದು ತಾಕೀತು ಮಾಡಿದ್ದಲ್ಲದೇ, ಶಿಸ್ತಿಗೆ ಆದ್ಯತೆ ನೀಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರಥಮ್ ವರ್ತನೆ ಬಗ್ಗೆ ಮಾತನಾಡಿದ ಮಾಳವಿಕಾ, ಸ್ಪೋರ್ಟಿವ್ ಆಗಿ ತೆಗೆದುಕೊಳ್ಳಿ ಎಂದು ಸದಸ್ಯರಿಗೆ ಸಲಹೆ ನೀಡಿದ್ದಾರೆ. ಮಾಳವಿಕಾ, ಭುವನ್ ಬಳಿ ಮಾತನಾಡಿದ್ದಕ್ಕೆ ಶಾಲಿನಿ ಅವರೊಂದಿಗೆ ನೇರವಾಗಿ ಮಾತನಾಡಬೇಡಿ ಎಂದಿದ್ದು, ಇದಕ್ಕೆ ಮಾಳವಿಕಾ ನಾನು ನ್ಯಾಯಪಾಲಕಿ ಎಂದು ಪ್ರತ್ಯುತ್ತರ ನೀಡಿದ್ದಾರೆ. ಸಂಜನಾರನ್ನು ಈಜುಕೊಳಕ್ಕೆ ಎಸೆಯಲು ಪ್ರಥಮ್ ಆಜ್ಞೆ ಮಾಡಿದರಾದರೂ, ನಂತರ ಶಿಕ್ಷೆ ಬದಲಿಸಿ, ನಗುತ್ತಾ ಲಾರ್ಡ್ ಪ್ರಥಮ್ ಸರ್ ಗೆ ಜೈ ಎಂದು ಅವರ ಕಟೌಟ್ ಗೆ ನಮಸ್ಕರಿಸಲು ತಿಳಿಸಿದ್ದಾರೆ. ಶಿಕ್ಷೆಗೊಳಗಾದ ಸಂಜನಾ ಕಣ್ಣೀರಿಟ್ಟಿದ್ದು, ಭುವನ್ ಸಮಾಧಾನಪಡಿಸಿದ್ದಾರೆ.

ಇದರೊಂದಿಗೆ ತಪ್ಪು ಮಾಡಿದ ಶಾಲಿನಿ ಕೂಡ ಶಿಕ್ಷೆ ಅನುಭವಿಸಿದ್ದಾರೆ. ಸದಸ್ಯರನ್ನು ಸೇನೆಗೆ ಸೇರಿಸಿಕೊಳ್ಳಲು ದೈಹಿಕ ಚಟುವಟಿಕೆಗಳನ್ನು ನಡೆಸಲಾಗಿದ್ದು, ಇದರಲ್ಲಿ ಸದಸ್ಯರೆಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ತಮ್ಮ ಸಮಸ್ಯೆಗಳನ್ನು ಕೋರ್ಟ್ ನಲ್ಲಿ ಹೇಳಿಕೊಂಡ ಸದಸ್ಯರಿಗೆ ದಂಡಾಧಿಕಾರಿ ಪ್ರಥಮ್ ಪರಿಹಾರ ಸೂಚಿಸಿದ್ದಾರೆ. ಒಟ್ಟಾರೆ ಮನೆಯಲ್ಲಿ ಪ್ರಥಮ್ ಶಿಸ್ತು, ಸ್ವಚ್ಛತೆಗೆ ಆದ್ಯತೆ ನೀಡಿ ಸೈ ಎನಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...