alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಾಲಾ’ ಚಿತ್ರಕ್ಕೂ ಕಾವೇರಿ ನದಿಗೂ ಏನು ಸಂಬಂಧ ಎಂದ ಪ್ರಕಾಶ್ ರಾಜ್

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯನ್ನು ಬೆಂಬಲಿಸಿ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿಕೆ ನೀಡಿದ್ದನ್ನು ಖಂಡಿಸಿರುವ ಕನ್ನಡಪರ ಸಂಘಟನೆಗಳು ರಜನಿ ಅಭಿನಯದ ‘ಕಾಲಾ’ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಚಿತ್ರ ಬಿಡುಗಡೆಗೆ ಅನುಮತಿ ನೀಡದಂತೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೂ ಕೆಲ ಸಂಘಟನೆಗಳು ಮನವಿ ಸಲ್ಲಿಸಿವೆ. ಈ ಮಧ್ಯೆ ನಟ ಪ್ರಕಾಶ್ ರಾಜ್ ‘ಕಾಲಾ’ ಚಿತ್ರದ ಪರ ಬ್ಯಾಟಿಂಗ್ ಮಾಡಿ ಟ್ವೀಟ್ ಮಾಡಿದ್ದಾರೆ.

‘ಕಾಲಾ’ ಚಿತ್ರದ ಬಿಡುಗಡೆಗೂ ಕಾವೇರಿ ನದಿ ವಿವಾದಕ್ಕೂ ಏನು ಸಂಬಂಧ ಎಂದು ಕೇಳಿರುವ ಪ್ರಕಾಶ್ ರಾಜ್, ಸಿನಿಮಾಗಳನ್ನೇ ಕೆಲವರು ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...