alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಡ್ನಿಯಲ್ಲಿ ಪತ್ನಿ-ಮಗನ ಜೊತೆ ಪ್ರಕಾಶ್ ರಾಜ್

ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುವ ನಟ ಪ್ರಕಾಶ್ ರಾಜ್ ಸದ್ಯ ಸಿಡ್ನಿಯಲ್ಲಿ ರಜೆ ಕಳೆಯುತ್ತಿದ್ದಾರೆ. ಕುಟುಂಬ ಸಮೇತ ಸಿಡ್ನಿಗೆ ತೆರಳಿರುವ ಪ್ರಕಾಶ್ ರಾಜ್, ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾರೆ. ಫೋಟೋದಲ್ಲಿ ಪ್ರಕಾಶ್ ರಾಜ್ ಪತ್ನಿ ಪೋನಿ ವರ್ಮಾ ಹಾಗೂ ಮಗ ಕಾಣಿಸಿಕೊಂಡಿದ್ದಾರೆ.

ಪ್ರಕಾಶ್ ರಾಜ್ ಪತ್ನಿ, ಮಗನ ಜೊತೆಗಿರುವ ನಾಲ್ಕೈದು ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾರೆ. ಸಿಡ್ನಿಯ ಪ್ರತಿಯೊಂದು ಪ್ರವಾಸಿ ಸ್ಥಳವನ್ನು ಭೇಟಿ ಮಾಡಿ ಎಂಜಾಯ್ ಮಾಡ್ತಿದ್ದಾರೆ ಪ್ರಕಾಶ್ ರಾಜ್.

ಬಹುಭಾಷಾ ನಟ ಪ್ರಕಾಶ್ ರಾಜ್ ಈವರೆಗೆ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 29 ವರ್ಷಗಳ ವೃತ್ತಿ ಜೀವನದಲ್ಲಿ 5 ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. 2010 ರಲ್ಲಿ 12 ವರ್ಷ ಚಿಕ್ಕವರಿರುವ ಪೋನಿ ವರ್ಮಾರನ್ನು ಪ್ರಕಾಶ್ ರಾಜ್ ಮದುವೆಯಾಗಿದ್ದಾರೆ. ಪೋನಿ ವರ್ಮಾ ಬಾಲಿವುಡ್ ನ ಕೋರಿಯೋಗ್ರಫರ್. ಪೋನಿ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಆಗಾಗ ಪತಿ ಜೊತೆಗಿರುವ ಫೋಟೋವನ್ನು ಹಾಕ್ತಿರುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...