alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡು ಮಗುವಿನ ತಂದೆಯಾದ ಪ್ರಕಾಶ್ ರೈ

prakash-raj_pony-verma

ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿನಯಿಸಿರುವ ಖ್ಯಾತ ನಟ ಪ್ರಕಾಶ್ ರೈ(ಪ್ರಕಾಶ್ ರಾಜ್) ಅವರು ತಂದೆಯಾಗಿದ್ದಾರೆ. ಬಹುಭಾಷಾ ನಟರಾಗಿರುವ ಪ್ರಕಾಶ್ ರೈ ಅವರ ಪತ್ನಿ ಪೋನಿ ವರ್ಮ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಪ್ರಕಾಶ್ ರೈ ಅವರು ಸುಮಾರು ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಮೊದಲ ಪತ್ನಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಪುತ್ರ ಇದ್ದಾರೆ. ಕೌಟುಂಬಿಕ ಕಾರಣಗಳಿಂದ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು. ಅವರ ಮಗ ಗಾಳಿಪಟ ಆರಿಸುವಾಗ ಬಿದ್ದು ಮೃತಪಟ್ಟಿದ್ದರು. ವಿಚ್ಛೇದನದ ಬಳಿಕ ಪ್ರಕಾಶ್ ರೈ 2010ರಲ್ಲಿ ಬಾಲಿವುಡ್ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಅವರನ್ನು ಮದುವೆಯಾಗಿದ್ದರು. ಪ್ರಕಾಶ್ ರೈ ಹಾಗೂ ಪೋನಿ ವರ್ಮ ದಂಪತಿಗೆ ಈಗ ಗಂಡು ಮಗು ಜನಿಸಿದೆ.

ಈ ಸಂತೋಷವನ್ನು ಪ್ರಕಾಶ್ ರೈ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ನಾನು ಮತ್ತು ಪತ್ನಿ ಪೋನಿ ವರ್ಮ ನಮ್ಮ ಜೀವನದ ಸಂಭ್ರಮದ ಕ್ಷಣ ಅನುಭವಿಸುತ್ತಿದ್ದೇವೆ. ನಮಗೆ ಮುದ್ದಾದ ಗಂಡು ಮಗು ಜನಿಸಿದೆ ಎಂದು ಅವರು ಟ್ವಿಟರ್ ನಲ್ಲಿ ಹೇಳಿದ್ದಾರೆ. ಪ್ರಕಾಶ್ ರೈ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...