alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭಾಸ್ ಬಗ್ಗೆ ಸಹೋದರಿಯ ಮನದ ಮಾತು

prabhas-latest-pics-01

ರೆಬೆಲ್ ಸ್ಟಾರ್ ಕೃಷ್ಣಂ ರಾಜು ಅವರಿಗೆ ಮೂವರು ಹೆಣ್ಣುಮಕ್ಕಳು. ಸಾಯಿ ಪ್ರದೀಪ್ತಿ, ಸಾಯಿ ಪ್ರಕೀರ್ತಿ ಹಾಗೂ ಸಾಯಿ ಪ್ರಸೀದಾ. ಈ ಮೂವರೂ ನಟ ಪ್ರಭಾಸ್ ಜೊತೆಗೆ ಸಖತ್ ಕ್ಲೋಸ್ ಆಗಿದ್ದಾರೆ. ಬಾಹುಬಲಿ ತುಂಬಾ ಸಿಂಪಲ್ ವ್ಯಕ್ತಿ, ನೆಚ್ಚಿನ ಸಹೋದರ ಮಾತ್ರವಲ್ಲ ಕ್ಲೋಸ್ ಫ್ರೆಂಡ್ ಕೂಡ. ಸಹೋದರಿಯರ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ತೆಗೆದುಕೊಳ್ತಾರಂತೆ.

prabhas-sister-pragathi

ಈ ಬಗ್ಗೆ ಸಾಯಿ ಪ್ರಕೀರ್ತಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಇಲ್ಲದ ಸಮಯದಲ್ಲಿ ಪ್ರಭಾಸ್, ಸಹೋದರಿಯರ ಜೊತೆಗೆ ಸಮಯ ಕಳೆಯುತ್ತಾರಂತೆ. ಅವರಿಗೆ ಇಷ್ಟವಾಗುವಂತಹ ಸ್ಪೆಷಲ್ ಗಿಫ್ಟ್ ಕೊಡ್ತಾರೆ. ನಾವು ಮೂವರೂ ಪ್ರಭಾಸ್ ಮದುವೆಗಾಗಿ ಕಾಯ್ತಿದ್ದೇವೆ ಎನ್ನುತ್ತಾರೆ ಪ್ರಕೀರ್ತಿ.

ಸಹೋದರನ ಮದುವೆಯಲ್ಲಿ ಸಖತ್ತಾಗಿ ಎಂಜಾಯ್ ಮಾಡ್ಬೇಕು ಅನ್ನೋದೇ ಅವರ ಆಸೆ. ಫಾರಿನ್ ಗೆ ಹೋದಾಗ್ಲೆಲ್ಲ ಪ್ರಭಾಸ್ ಏನಾದ್ರೂ ತಂದೇ ತರ್ತಾರಂತೆ, ಸಹೋದರಿಯರ ಓದಿನ ಬಗ್ಗೆ ಸಿಕ್ಕಾಪಟ್ಟೆ ಕೇರ್ ತೆಗೆದುಕೊಳ್ತಾರೆ ಪ್ರಭಾಸ್. ಅವರ ಸರಳತೆ, ವಿಶಿಷ್ಟ ವ್ಯಕ್ತಿತ್ವವನ್ನು ಸಹೋದರಿಯರು ಕೊಂಡಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...