alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಕತ್ರೀನಾ ಕುರಿತ ಪ್ರಭಾಸ್ ಟ್ವೀಟ್

pra

ನಟ ಪ್ರಭಾಸ್ ಅಭಿನಯದ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಪ್ರಭಾಸ್ ಗೆ ನಾಯಕಿ ಯಾರಾಗ್ತಾರೆ ಅನ್ನೋದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ‘ಸಾಹೂ’ ಚಿತ್ರದಲ್ಲಿ ನಟಿ ಕತ್ರೀನಾ ಕೈಫ್, ಪ್ರಭಾಸ್ ಗೆ ನಾಯಕಿಯಾಗ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಖುದ್ದು ಪ್ರಭಾಸ್ ಸ್ಪಷ್ಟನೆ ನೀಡಿದ್ದಾರೆ.

‘ಸಾಹೂ’ ಚಿತ್ರಕ್ಕೆ ಕತ್ರೀನಾ ಹಿರೋಯಿನ್ ಅನ್ನೋದು ಸುಳ್ಳು ಸುದ್ದಿ, ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದೆ ಅಂತಾ ಪ್ರಭಾಸ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಪ್ರಭಾಸ್ ಜೊತೆ ಕತ್ರೀನಾ ನಟಿಸ್ತಾರೆ ಅನ್ನೋ ಸುದ್ದಿ ಹುಟ್ಟಿಕೊಳ್ಳೋದಕ್ಕೆ ಕಾರಣವೂ ಇಲ್ಲದಿಲ್ಲ. ಪ್ರಭಾಸ್ ಜೊತೆ ನಟಿಸಲು ನನಗೂ ಆಸೆಯಿದೆ ಅಂತಾ ಕ್ಯಾಟ್ ಹೇಳಿಕೊಂಡಿದ್ಲು.

ಸಿನೆಮಾದ ಪಾತ್ರಕ್ಕೆ ಸೂಕ್ತವಾದ ನಟಿಗಾಗಿ ಹುಡುಕಾಟ ನಡೆಯುತ್ತಿದೆ ಅಂತಾ ‘ಸಾಹೂ’ ನಿರ್ದೇಶಕ ಸುಜಿತ್ ಹೇಳಿದ್ದಾರೆ. ಶ್ರದ್ಧಾ ಕಪೂರ್, ಪರಿಣಿತಿ ಚೋಪ್ರಾ ಇಬ್ಬರನ್ನೂ ನಿರ್ಮಾಪಕರು ಅಪ್ರೋಚ್ ಮಾಡಿದ್ದರು. ಆದ್ರೆ ಸಂಭಾವನೆ ಹೆಚ್ಚು ಅನ್ನೋ ಕಾರಣಕ್ಕೆ ಅವರನ್ನು ಕೈಬಿಟ್ಟಿದ್ದಾರೆ. ಹಾಗಾಗಿ 150 ಕೋಟಿ ಬಜೆಟ್ ನ ‘ಸಾಹೂ’ ಚಿತ್ರದಲ್ಲಿ ಪ್ರಭಾಸ್ ಗೆ ಸಂಗಾತಿ ಯಾರು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...