alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರದ್ಧಾಗೆ ಭರ್ಜರಿ ಟ್ರೀಟ್ ನೀಡಿದ ಪ್ರಭಾಸ್

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಇತ್ತೀಚಿಗಷ್ಟೆ ಸಾಹೋ ಚಿತ್ರದ ಶೂಟಿಂಗ್ ಶುರುಮಾಡಿದ್ದಾಳೆ. ಬಾಹುಬಲಿ ನಟ ಪ್ರಭಾಸ್ ಜೊತೆ ಸಾಹೋ ಚಿತ್ರದಲ್ಲಿ ನಟಿಸುತ್ತಿರುವ ಶ್ರದ್ಧಾ ತುಂಬಾ ಖುಷಿಯಾಗಿದ್ದಾಳೆ. ಅದ್ರಲ್ಲೂ ಸಾಹೋ ಚಿತ್ರ ತಂಡ ಹಾಗೂ ಪ್ರಭಾಸ್ ನೀಡಿದ ವಿಶೇಷ ಟ್ರೀಟ್ ಶ್ರದ್ಧಾಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ.

ಸಾಹೋ ಚಿತ್ರತಂಡ ಹಾಗೂ ನಟ ಪ್ರಭಾಸ್ ಶ್ರದ್ಧಾಗೆ ಹೈದ್ರಾಬಾದಿನ ಸ್ಪೇಷಲ್ ತಿಂಡಿಗಳ ರುಚಿ ಸವಿಯುವ ಅವಕಾಶ ನೀಡಿದ್ರು. ಸೆಟ್ ನಲ್ಲಿ ಸ್ಪೇಷಲ್ ಊಟ ನೀಡಿದ್ರು. ಈ ಫೋಟೋವನ್ನು ಶ್ರದ್ಧಾ ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿದ್ದಾಳೆ. ಹಾಗೆ ಸಾಹೋ ಶೂಟಿಂಗ್ ಸೆಟ್ ನ ಕೆಲ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾಳೆ.

ಸಾಹೋ ಚಿತ್ರದ ಫೋಟೋವನ್ನು ಟ್ವೀಟರ್ ಗೆ ಹಾಕಿದ್ದ ಶ್ರದ್ಧಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲು ಕಾತರಳಾಗಿದ್ದೇನೆ. ಅದೂ ಪ್ರಭಾಸ್ ಜೊತೆ ಕೆಲಸ ಮಾಡಲು ತುಂಬಾ ಖುಷಿಯಾಗಿದೆ. ವಾವ್ಹ್ ಎಂದು ಶ್ರದ್ಧಾ ಈ ಹಿಂದೆ ಟ್ವಿಟ್ ಮಾಡಿದ್ದಳು. ಈ ಹಿಂದೆ ಸಾಹೋ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾಳೆನ್ನಲಾಗ್ತಿತ್ತು. ಇನ್ನೂ ಕೆಲ ನಟಿಯರ ಹೆಸರು ಕೇಳಿ ಬಂದಿತ್ತು. ಆದ್ರೆ ಕೊನೆಯದಾಗಿ ಶ್ರದ್ಧಾಗೆ ಅವಕಾಶ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...