alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳಿಗೆ ಬಿಗ್ ಟ್ರೀಟ್ ಕೊಡ್ತಿದ್ದಾರೆ ಪ್ರಭಾಸ್

ನಟ ಪ್ರಭಾಸ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಪ್ರಭಾಸ್ ಅಭಿನಯದ ಎಲ್ಲ ಚಿತ್ರಗಳನ್ನು ನೋಡಿದ್ದು, ಅಭಿಮಾನಿ ಕ್ಲಬ್ ನ ಸದಸ್ಯರಾಗಿದ್ದರೆ ಇಂದಿನ ಸಂಜೆ ನಿಮಗೆ ಮತ್ತಷ್ಟು ಖುಷಿ ನೀಡಲಿದೆ. ಸೂಪರ್ ಸ್ಟಾರ್ ಪ್ರಭಾಸ್ ರನ್ನು ಸಾಮಾಜಿಕ ಜಾಲತಾಣದಲ್ಲಿ ನೀವು ಲೈವ್ ನೋಡಬಹುದು.

‘ಮಹಾನುಬಾವುಡು’ ಚಿತ್ರದ ಮ್ಯೂಸಿಕ್ ಇಂದು ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ ಪ್ರಭಾಸ್. ಮೆಹ್ರೆನ್ ಕೌರ್ ಪಿರ್ಜಾಡಾ ಮತ್ತು ಶರ್ವಾನಂದ್ ನಟಿಸಿರುವ ಈ ಚಿತ್ರ ಪ್ರಭಾಸ್ ಹೋಮ್ ಬ್ಯಾನರ್ ನಲ್ಲಿ ಬರ್ತಿದೆ. ಚಿತ್ರ ಇದೇ 27ರಂದು ತೆರೆಗೆ ಬರಲಿದ್ದು, ಶನಿವಾರ ಸಂಜೆ ಚಿತ್ರದ ಮ್ಯೂಸಿಕ್ ಬಿಡುಗಡೆಯಾಗಲಿದೆ.

ಪ್ರಭಾಸ್ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಆಹ್ವಾನ ನೀಡಲಾಗಿದೆ. ಬೇರೆ ಬೇರೆ ಸಾಮಾಜಿಕ ಜಾಲತಾಣದಲ್ಲಿ ಮ್ಯೂಸಿಕ್ ಬಿಡುಗಡೆ ಕಾರ್ಯಕ್ರಮ ನೇರ ಪ್ರಸಾರವಾಗಲಿದ್ದು, ಅಭಿಮಾನಿಗಳು ಉಚಿತವಾಗಿ ಕಾರ್ಯಕ್ರಮ ವೀಕ್ಷಣೆ ಮಾಡಬಹುದಾಗಿದೆ. ‘ಸಾಹೋ’ ಚಿತ್ರದ ಚಿತ್ರೀಕರಣಕ್ಕೆ ಬ್ರೇಕ್ ನೀಡಿರುವ ಪ್ರಭಾಸ್ ಅಭಿಮಾನಿಗಳ ಜೊತೆ ಬೆರೆಯಲು ನಿರ್ಧರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...