alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಹೋ ಚಿತ್ರದ ರಿಲೀಸ್ ಗೆ ಫಿಕ್ಸಾಗಿದೆ ಮುಹೂರ್ತ

ಪ್ರಭಾಸ್ ಅಭಿನಯದ ಸಾಹೋ ಚಿತ್ರಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. 2018ರಲ್ಲಿ ಸಾಹೋ ತೆರೆಗೆ ಬರಲಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಯಾವಾಗ ಅನ್ನೋದು ಪಕ್ಕಾ ಆಗಿರಲಿಲ್ಲ. ಆದ್ರೀಗ ಸಾಹೋ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

ಬಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್, ಕಾಲಿವುಡ್, ಮಾಲಿವುಡ್ ಹೀಗೆ ಎಲ್ಲಾ ಕಡೆಯೂ ಪ್ರಭಾಸ್ ರ ಹೊಸ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಹಾಗಾಗಿ ಇದನ್ನು 2018ರ ದೀಪಾವಳಿಗೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಬೇರೆ ಭಾಷೆಯ ಪ್ರೇಕ್ಷಕರು ಕೂಡ ಈ ಚಿತ್ರ ವೀಕ್ಷಿಸಲು ಕಾತರರಾಗಿದ್ದಾರೆ.

ಆದ್ರೆ ಇದುವರೆಗೂ ಚಿತ್ರದ ಶೂಟಿಂಗ್ ಪೂರ್ತಿಯಾಗಿಲ್ಲ. ನಂತರ ಎಡಿಟಿಂಗ್ ಗೆ ಕೂಡ ಸಮಯ ಬೇಕಿದ್ದು, ಸಿನೆಮಾ ಬಿಡುಗಡೆ 2019ಕ್ಕೆ ಮುಂದೂಡಿಕೆ ಆಗಬಹುದು ಅನ್ನೋದು ಕೆಲವರ ಲೆಕ್ಕಾಚಾರ. ಆದ್ರೆ ಪ್ರೊಡಕ್ಷನ್ ಹೊಣೆ ಹೊತ್ತಿರುವ ಯುವಿ ಕ್ರಿಯೇಶನ್ಸ್ ಆದಷ್ಟು ಬೇಗ ಪ್ರಾಜೆಕ್ಟ್ ಮುಗಿಸಿ, 2018ರ ದೀಪಾವಳಿಗೆ ಬಿಡುಗಡೆ ಮಾಡಲೇಬೇಕೆಂದು ನಿರ್ಧರಿಸಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...