alex Certify
ಕನ್ನಡ ದುನಿಯಾ       Mobile App
       

Kannada Duniya

ಜಪಾನ್ ಬಾಕ್ಸ್ ಆಫೀಸ್ ನಲ್ಲಿ ‘ಬಾಹುಬಲಿ’ ಹವಾ

ಹಿಂದಿನ ವರ್ಷ ದಾಖಲೆ ಮೇಲೆ ದಾಖಲೆ ಬರೆದ ಬಾಹುಬಲಿ-2 ಜಪಾನ್ ನಲ್ಲಿ ತನ್ನ ಅಬ್ಬರ ಮುಂದುವರೆಸಿದೆ. ಕೆಲ ದಿನಗಳ ಹಿಂದಷ್ಟೇ ಜಪಾನ್ ನಲ್ಲಿ ಬಿಡುಗಡೆಯಾಗಿರುವ ಬಾಹುಬಲಿ-2 ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರ ಜಪಾನ್ ನಲ್ಲಿ 550 ಮಿಲಿಯನ್ ಅಮೆರಿಕನ್ ಡಾಲರ್ ಗಳಿಕೆ ಕಂಡಿದೆ.

ಏಳು ವಾರಗಳಿಂದ ಜಪಾನ್ ನಲ್ಲಿ ಚಿತ್ರ ಅದ್ಭುತ ಪ್ರದರ್ಶನ ಕಾಣ್ತಿದೆ. ಜಪಾನ್ ಬಾಕ್ಸ್ ಆಫೀಸ್ ನಲ್ಲಿಯೂ ದಾಖಲೆ ಬರೆಯುತ್ತಿರುವ ಬಾಹುಬಲಿ ಚರ್ಚೆ ಈಗ್ಲೂ ಮುಂದುವರೆದಿದೆ. ಭಾರತದಲ್ಲಿ ಬಾಹುಬಲಿ ಚಿತ್ರದ ಮೂಲಕ ಅಭಿಮಾನಿಗಳ ಸಂಖ್ಯೆಯನ್ನು ಏರಿಸಿಕೊಂಡಿದ್ದ ಪ್ರಭಾಸ್ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರಾಗಿದ್ದಾರೆ. ಈಗ ಜಪಾನ್ ಜನ ಕೂಡ ಪ್ರಭಾಸ್ ನಟನೆಗೆ ಮಾರು ಹೋಗಿದ್ದಾರೆ.

ಭಾರತದ ಎಲಿಜಬಲ್ ಬ್ಯಾಚುಲರ್ ಪ್ರಭಾಸ್ ಸದ್ಯ ಸಾಹೋ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಸಾಹೋ ಕೂಡ ದೊಡ್ಡ ಬಜೆಟ್ ಚಿತ್ರವಾಗಿದ್ದು, ಮೂರು ಭಾಷೆಯಲ್ಲಿ ಬರ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...