alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ‘ಬಾಹುಬಲಿ’ ಪ್ರಭಾಸ್ ಕುರಿತ ಇಂಟ್ರೆಸ್ಟಿಂಗ್ ಸಂಗತಿ

prabahs-4567‘ಬಾಹುಬಲಿ’ ಸರಣಿ ಚಿತ್ರಗಳ ಬಳಿಕ ನಟ ಪ್ರಭಾಸ್ ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲ ಬಾಲಿವುಡ್ ನಲ್ಲೂ ಮನೆ ಮಾತಾಗಿದ್ದಾರೆ. ಸದ್ಯ ‘ಸಾಹೋ’ ಚಿತ್ರದ ಶೂಟಿಂಗ್ ನಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದು, ಈ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣವನ್ನು ದುಬೈನಲ್ಲಿ ಇತ್ತೀಚೆಗೆ ಭಾರೀ ವೆಚ್ಚ ಮಾಡಿ ಚಿತ್ರೀಕರಿಸಲಾಗಿದೆ. ಪ್ರಭಾಸ್ ಕುರಿತಾದ ಕೆಲ ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ.

ಪ್ರಭಾಸ್ ಅವರ ಮೂಲ ಹೆಸರು ವೆಂಕಟ ಸತ್ಯನಾರಾಯಣ ಪ್ರಭಾಸ್ ರಾಜು ಉಪ್ಪಲಪಾಟಿ ಎಂದು. ಯು. ಸತ್ಯನಾರಾಯಣ ರಾಜು ಹಾಗೂ ಶಿವಕುಮಾರಿ ದಂಪತಿಗಳ ಪುತ್ರನಾದ ಪ್ರಭಾಸ್ ಹುಟ್ಟಿದ್ದು ಚೆನ್ನೈನಲ್ಲಿ. ಟಾಲಿವುಡ್ ನ ಹಿರಿಯ ನಟ ಕೃಷ್ಣಂರಾಜು, ಪ್ರಭಾಸ್ ಅವರ ಹತ್ತಿರದ ಸಂಬಂಧಿ.

‘ಬಾಹುಬಲಿ’ ಚಿತ್ರ ಭರ್ಜರಿ ಯಶಸ್ಸು ಕಂಡ ಬಳಿಕ ಅವರಿಗೆ ದಕ್ಷಿಣ ಭಾರತ ಮಾತ್ರವಲ್ಲದೇ ದೇಶದ ಇತರೆಡೆಯಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದು, ಬಾಲಿವುಡ್ ಚಿತ್ರರಂಗದಲ್ಲಿ ಅವಕಾಶಗಳು ಅರಸಿಕೊಂಡು ಬರುತ್ತಿವೆ. ಆದರೆ 2014 ರಲ್ಲಿ ತೆರೆ ಕಂಡ ಪ್ರಭುದೇವಾ ನಿರ್ದೇಶನದ, ಅಜಯ್ ದೇವಗನ್ ರ ‘ಆಕ್ಷನ್ ಜಾಕ್ಸನ್’ ಚಿತ್ರದ ಕಿರು ಪಾತ್ರವೊಂದರಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದರು.

‘ಬಾಹುಬಲಿ’ ಚಿತ್ರದ ಪಾತ್ರಕ್ಕಾಗಿ ಸದೃಢ ಮೈಕಟ್ಟನ್ನು ಹೊಂದಬೇಕಿದ್ದರಿಂದ 2010 ರ ಮಿಸ್ಟರ್ ವರ್ಲ್ಡ್ ಲಕ್ಷ್ಮಣ್ ರೆಡ್ಡಿ ಪ್ರಭಾಸ್ ಅವರಿಗೆ ತರಬೇತಿ ನೀಡಿದ್ದರು. ಜಿಮ್ ನಲ್ಲಿ ದೇಹ ದಂಡಿಸಲು ಚಿತ್ರತಂಡ, ಸುಮಾರು 1.5 ಕೋಟಿ ರೂ. ಮೌಲ್ಯದ ಉಪಕರಣಗಳನ್ನು ಕೊಡುಗೆಯಾಗಿ ನೀಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...