alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭಾಸ್ ಆಕ್ಷನ್ ದೃಶ್ಯಕ್ಕೆ ಖರ್ಚಾಗಿದ್ದೆಷ್ಟು ಗೊತ್ತಾ…?

ಪ್ರಭಾಸ್ ಅಭಿನಯದ ಮುಂದಿನ ಚಿತ್ರ ‘ಸಾಹೋ’ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಬಾಹುಬಲಿ ನಂತ್ರ ದೇಶದಲ್ಲೊಂದೇ ಅಲ್ಲ ವಿದೇಶದಲ್ಲೂ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಪ್ರಭಾಸ್ ಸಾಹೋ ಚಿತ್ರದಲ್ಲಿ ಭರ್ಜರಿ ಆಕ್ಷನ್ ಮಾಡಿದ್ದಾರಂತೆ.

ಚಿತ್ರದ ಆಕ್ಷನ್ ದೃಶ್ಯಗಳಿಗಾಗಿ ನಿರ್ಮಾಪಕರು 90 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಬಾಹುಬಲಿಗಿಂತ ಹೆಚ್ಚು ಆಕ್ಷನ್ ಇದೆಯಂತೆ. ಅಬುದಾಬಿಯಲ್ಲಿ ಚಿತ್ರದ ಕೆಲ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಕಾರು, ಬೈಕ್, ಹೆಲಿಕಾಪ್ಟರ್ ಬಳಸಿ ಅಪಾಯಕಾರಿ ಸ್ಟಂಟ್ ಮಾಡಲಾಗಿದೆಯಂತೆ.

ಶ್ರದ್ಧಾ ಕಪೂರ್ ಹಾಗೂ ಪ್ರಭಾಸ್ ಹೈದ್ರಾಬಾದ್ ನಲ್ಲಿ ಮೂರನೇ ಶೆಡ್ಯೂಲ್ ಶೂಟಿಂಗ್ ಮಾಡ್ತಿದ್ದಾರೆ. ಕೊನೆಯ ಚಿತ್ರೀಕರಣ ರೊಮೇನಿಯಾದಲ್ಲಿ ಶೂಟ್ ಆಗಲಿದೆಯಂತೆ. ಬಾಹುಬಲಿಯಂತೆ ಅರಮನೆ ಸುತ್ತಮುತ್ತ ಸ್ಟಂಟ್ ಮಾಡುವ ದೃಶ್ಯ ರೊಮೇನಿಯಾದಲ್ಲಿ ಚಿತ್ರೀಕರಣಗೊಳ್ಳಲಿದೆ. 20 ನಿಮಿಷಗಳ ದೃಶ್ಯವಿರಲಿದೆಯಂತೆ. VFX ಬಳಸಿ ದೃಶ್ಯಗಳನ್ನು ರಿಯಲ್ ರೂಪದಲ್ಲಿ ತೋರಿಸುವ ಪ್ರಯತ್ನ ನಡೆಯುತ್ತಿದೆ. ಚಿತ್ರದಲ್ಲಿ ಶೇಕಡಾ 70ರಷ್ಟು VFX ಹಾಗೂ 30ರಷ್ಟು ರಿಯಲ್ ದೃಶ್ಯಗಳಿರಲಿವೆಯಂತೆ. ಈ ವರ್ಷದ ಅಂತ್ಯದೊಳಗೆ ಚಿತ್ರದ ಶೂಟಿಂಗ್ ಮುಗಿಯಲಿದೆ. 2019 ರ ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...