alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭಾಸ್, ಬನ್ಸಾಲಿ ಆಫರ್ ನಿರಾಕರಿಸಿದ್ದೇಕೆ ಗೊತ್ತಾ…?

2015 ರಲ್ಲಿ ಬಾಹುಬಲಿ ಚಿತ್ರ ವೀಕ್ಷಣೆ ಮಾಡಿದ್ದ ಸಂಜಯ್ ಲೀಲಾ ಬನ್ಸಾಲಿ, ನಟ ಪ್ರಭಾಸ್ ನಟನೆಗೆ ಆಕರ್ಷಿತರಾಗಿದ್ದರಂತೆ. ತಮ್ಮ ಚಿತ್ರದಲ್ಲಿ ಪ್ರಭಾಸ್ ನೋಡಲು ಬಯಸಿದ್ದರಂತೆ. ಇದೇ ಕಾರಣಕ್ಕೆ ಪ್ರಭಾಸ್ ಗೆ ಚಿತ್ರದ ಆಫರ್ ನೀಡಿದ್ದರು ಎನ್ನಲಾಗಿದೆ. ಸಂಜಯ್ ಲೀಲಾ ಬನ್ಸಾಲಿಯಂತಹ ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡಲು ಪ್ರಭಾಸ್ ಉತ್ಸಾಹಿತರಾಗಿದ್ದರಂತೆ.

ಸಂಜಯ್ ಲೀಲಾ ಬನ್ಸಾಲಿ ‘ಪದ್ಮಾವತ್’ ಚಿತ್ರದಲ್ಲಿ ನಟಿಸಲು ಪ್ರಭಾಸ್ ಗೆ ಆಫರ್ ನೀಡಿದ್ದರು ಎನ್ನಲಾಗಿದೆ. ರಾಣಿಯಾಗಿ ದೀಪಿಕಾ, ಖಿಲ್ಜಿಯಾಗಿ ರಣವೀರ್ ಕಪೂರ್ ಮೊದಲೇ ಫೈನಲ್ ಆಗಿದ್ದರಿಂದ ಮಹಾರಾವಲ್ ರತನ್ ಸಿಂಗ್ ಪಾತ್ರಕ್ಕೆ ಆಫರ್ ನೀಡಿದ್ದರಂತೆ. ಆರಂಭದಲ್ಲಿ ಓಕೆ ಎಂದಿದ್ದ ಪ್ರಭಾಸ್, ಕಥೆ ಕೇಳಿ ಪಾತ್ರ ನಿರಾಕರಿಸಿದ್ದರಂತೆ.

ಬಾಹುಬಲಿ ನಂತ್ರ ದೇಶ-ವಿದೇಶಗಳಲ್ಲಿ ಹೆಸರು ಮಾಡಿರುವ ಪ್ರಭಾಸ್, ಪದ್ಮಾವತ್ ಚಿತ್ರದ ಪಾತ್ರ ತನ್ನ ಯಶಸ್ಸಿಗೆ ಹಿನ್ನೆಡೆಯಾಗಲಿದೆ ಎಂದು ಭಾವಿಸಿದ್ರಂತೆ. ದೀಪಿಕಾ ಜೊತೆ ನಟಿಸಲೂ ಆಸಕ್ತರಾಗಿದ್ದ ಪ್ರಭಾಸ್ ಕೊನೆಯಲ್ಲಿ ಚಿತ್ರ ಕೈಬಿಟ್ಟಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...