alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಾಹೋ’ ಚಿತ್ರದಲ್ಲಿ ಈ ಸಾಹಸ ಮಾಡ್ತಿದ್ದಾರೆ ಪ್ರಭಾಸ್

ಬಾಹುಬಲಿ ಸಿನೆಮಾ ನೋಡಿರೋ ಅಭಿಮಾನಿಗಳೆಲ್ಲ ಪ್ರಭಾಸ್ ರ ಮುಂದಿನ ಚಿತ್ರ ಸಾಹೋಗಾಗಿ ಕಾಯ್ತಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಆಗಿರೋದ್ರಿಂದ ಅಭಿಮಾನಿಗಳಿಗೆ ಪ್ರಭಾಸ್ ನಿರಾಸೆ ಉಂಟು ಮಾಡೋ ಸಾಧ್ಯತೆಗಳಿಲ್ಲ. ವಿಶೇಷ ಅಂದ್ರೆ ಚಿತ್ರದ ಆ್ಯಕ್ಷನ್ ದೃಶ್ಯಗಳನ್ನೆಲ್ಲ ಹಾಲಿವುಡ್ ಸ್ಟೈಲ್ ನಲ್ಲಿ ಶೂಟಿಂಗ್ ಮಾಡಲಾಗ್ತಿದೆಯಂತೆ.

ಇದಕ್ಕಾಗಿಯೇ ಟೆಕ್ನಿಶಿಯನ್ ಗಳು ಮತ್ತು ಆ್ಯಕ್ಷನ್ ಕೊರಿಯೋಗ್ರಾಫರ್ ಗಳನ್ನು ಕರೆಸಲಾಗಿದೆ. ಚಿತ್ರದ ಇನ್ನೊಂದು ಸ್ಪೆಷಾಲಿಟಿ ಅಂದ್ರೆ ಅಂಡರ್ ವಾಟರ್ ಸೀಕ್ವೆನ್ಸ್ ಗಳು. ಈ ದೃಶ್ಯಗಳಿಗಾಗಿ ಪ್ರಭಾಸ್ ಸಾಕಷ್ಟು ಕಸರತ್ತು ನಡೆಸಿದ್ದಾರೆ. ಇದಕ್ಕಾಗಿಯೇ ವಿಶೇಷ ತರಬೇತಿ ಕೂಡ ಪಡೆದಿದ್ದಾರಂತೆ.

ಚಿತ್ರದ ಪ್ರತಿ ದೃಶ್ಯವೂ ಪರ್ಫೆಕ್ಟ್ ಆಗಿರಬೇಕು ಅನ್ನೋದು ಪ್ರಭಾಸ್ ಆಸೆ. ಅದಕ್ಕಾಗಿ ಎಂಥಾ ಸಾಹಸವನ್ನು ಬೇಕಾದ್ರೂ ಮಾಡಲು ಈ ನಟ ಸಿದ್ಧರಿದ್ದಾರಂತೆ. ಸಾಹೋ ಚಿತ್ರದ ಅಂಡರ್ ವಾಟರ್ ಸೀನ್ ಗಳಿಗಾಗಿಯೇ ಪ್ರಭಾಸ್ ಆಳ ಸಮುದ್ರದಲ್ಲಿ ಡೈವಿಂಗ್ ಕಲಿತಿದ್ದಾರೆ.

ಸದ್ಯ ಹೈದ್ರಾಬಾದ್ ನಲ್ಲಿ ಸಾಹೋ ಶೂಟಿಂಗ್ ನಡೆಯುತ್ತಿದೆ. ಚಿತ್ರದ ನಾಯಕಿ ಶ್ರದ್ಧಾ ಕಪೂರ್ ಕೂಡ ಸದ್ಯದಲ್ಲೇ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ.

Prepping for next schedule!😎 #prep #work #travel #shoot #locations

A post shared by Sujeeth (@sujeethsign) on

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...