alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ಹುಟ್ಟು ಹಬ್ಬಕ್ಕೆ ಪ್ರಭಾಸ್ ಕೊಟ್ಟ ಗಿಫ್ಟ್ ಏನು ಗೊತ್ತಾ..?

ನವೆಂಬರ್ 7 ರಂದು ನಟಿ ಅನುಷ್ಕಾ ಶೆಟ್ಟಿ ತಮ್ಮ 36 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡ ಅನುಷ್ಕಾ ಶೆಟ್ಟಿ, ತಮ್ಮ ಹಿರಿಯ ಕಾರು ಚಾಲಕರೊಬ್ಬರಿಗೆ 12 ಲಕ್ಷ ರೂ. ಮೌಲ್ಯದ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಅನುಷ್ಕಾ ಶೆಟ್ಟಿಯವರ ಹುಟ್ಟು ಹಬ್ಬಕ್ಕೆ ಬಾಹುಬಲಿ ಪ್ರಭಾಸ್ ಏನು ಗಿಫ್ಟ್ ಕೊಟ್ಟಿರಬಹುದೆಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು. ಮಾಧ್ಯಮವೊಂದರ ವರದಿ ಪ್ರಕಾರ ಪ್ರಭಾಸ್ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಅನುಷ್ಕಾ ಶೆಟ್ಟಿಯವರಿಗೆ ಗಿಫ್ಟ್ ಆಗಿ ನೀಡಿದ್ದಾರೆನ್ನಲಾಗಿದೆ.

ತೆರೆ ಮೇಲೆ ಭರ್ಜರಿ ಯಶಸ್ಸು ಸಾಧಿಸಿರುವ ಈ ಜೋಡಿ ನಿಜ ಜೀವನದಲ್ಲೂ ಒಂದಾಗಬೇಕೆಂಬುದು ಅಭಿಮಾನಿಗಳ ಬಯಕೆಯಾಗಿದ್ದು, ಆದರೆ ಇಬ್ಬರು ಮಾತ್ರ ಈ ಕುರಿತು ಬಾಯ್ಬಿಡುತ್ತಿಲ್ಲ. ಅಕ್ಟೋಬರ್ 23 ರಂದು ಪ್ರಭಾಸ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ವೇಳೆ ಅನುಷ್ಕಾ ದುಬಾರಿ ಬೆಲೆಯ ವಾಚ್ ಗಿಫ್ಟ್ ಆಗಿ ನೀಡಿದ್ದರೆನ್ನಲಾಗಿದೆ.

ಪ್ರಭಾಸ್ ಸಿನಿಮಾ ರಂಗಕ್ಕೆ ಕಾಲಿಟ್ಟು ಇಂದಿಗೆ 15 ವರ್ಷಗಳಾಗಿದ್ದು, ಸದ್ಯ ‘ಸಾಹೋ’ ಚಿತ್ರದಲ್ಲಿ ಶ್ರದ್ದಾ ಕಪೂರ್ ಜೊತೆ ಪ್ರಭಾಸ್ ಅಭಿನಯಿಸುತ್ತಿದ್ದರೆ, ಅನುಷ್ಕಾ ಶೆಟ್ಟಿ ‘ಭಾಗಮತಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದಂದೇ ಭಾಗಮತಿ ಪೋಸ್ಟರ್ ರಿಲೀಸ್ ಆಗಿದ್ದು, ಇದಕ್ಕೆ ‘ಬಾಹುಬಲಿ’ ನಿರ್ದೇಶಕ ರಾಜಮೌಳಿ ಸೇರಿದಂತೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...