alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ಬಳಿಕ ಪ್ರಭಾಸ್ ಸಂಭಾವನೆ ಎಷ್ಟು ಗೊತ್ತಾ?

prabhas-was-paid-a-whopping-amount-of-rs-25-crore-201705-960529

ಈಗ ಚಿತ್ರರಂಗದಲ್ಲೆಲ್ಲಾ ‘ಬಾಹುಬಲಿ’ಯದ್ದೇ ಮಾತು. ಎಲ್ಲರೂ ನಟ ಪ್ರಭಾಸ್ ಅವರ ಬಿಗ್ ಫ್ಯಾನ್ ಆಗ್ಬಿಟ್ಟಿದ್ದಾರೆ. ಪ್ರಭಾಸ್ ನಾಯಕನಾಗಿ ನಟಿಸಿರೋ ‘ಬಾಹುಬಲಿ 2: ದಿ ಕನ್ ಕ್ಲೂಷನ್’ ಚಿತ್ರ ಈಗಾಗ್ಲೇ 1000 ಕೋಟಿ ಕಲೆಕ್ಷನ್ ಮಾಡಿದೆ. ಹಾಗಾಗಿ ಎಲ್ಲಾ ಕಡೆಯೂ ಬಾಹುಬಲಿಯ ಜಪ ಜೋರಾಗಿದೆ

ಜನಪ್ರಿಯತೆಯ ಜೊತೆಜೊತೆಗೆ ಪ್ರಭಾಸ್ ತಮ್ಮ ಸಂಭಾವನೆಯನ್ನು ಕೂಡ ಏರಿಸಿದ್ದಾರಂತೆ. ಬಾಹುಬಲಿ ಚಿತ್ರಕ್ಕೂ ಮುನ್ನ ಪ್ರಭಾಸ್ ಒಂದು ಚಿತ್ರದಲ್ಲಿ ಅಭಿನಯಿಸಲು 20-25 ಕೋಟಿ ರೂಪಾಯಿ ಪಡೆಯುತ್ತಿದ್ರು. ಈಗ 30 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡ್ತಿದ್ದಾರೆ. ಈ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ಕಲಾವಿದರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಮೂಲಗಳ ಪ್ರಕಾರ ಬಾಹುಬಲಿ ಚಿತ್ರದಲ್ಲೂ ಅತಿ ಹೆಚ್ಚು ಸಂಭಾವನೆ ಪಡೆದಿರುವ ಕಲಾವಿದ ಅಂದ್ರೆ ಪ್ರಭಾಸ್. ಅವರಿಗೆ 28 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ. ವಿಲನ್ ಪಾತ್ರ ಮಾಡಿರುವ ರಾಣಾ ದಗ್ಗುಬಾಟಿಗೆ 15 ಕೋಟಿ, ತಮನ್ನಾ ಹಾಗೂ ಅನುಷ್ಕಾ ಶೆಟ್ಟಿಗೆ ತಲಾ 5 ಕೋಟಿ, ರಮ್ಯ ಕೃಷ್ಣಗೆ 2.5 ಕೋಟಿ, ಸತ್ಯರಾಜ್ ಗೆ 2 ಕೋಟಿ ರೂಪಾಯಿ ಸಂಭಾವನೆ ಕೊಡಲಾಗಿದೆಯಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...