alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ‘ಧೂಮ್’ನಲ್ಲಿ ‘ಬಾಹುಬಲಿ’ ಪ್ರಭಾಸ್ ಮಿಂಚಿಂಗ್ !

baahubali prabhas

ಬಾಲಿವುಡ್ ನಲ್ಲಿ ‘ಧೂಮ್’ ಸರಣಿಯ ಮತ್ತೊಂದು ಚಿತ್ರ ಮೂಡಿಬರುತ್ತಿದೆ. ‘ಧೂಮ್- ರೀ ಲೋಡೆಡ್’ ಎಂದು ಹೆಸರಿಸಲಾಗಿರುವ ಈ ಚಿತ್ರ ಆರಂಭದಲ್ಲೇ ಭಾರೀ ಸೌಂಡ್ ಮಾಡುತ್ತಿದೆ. ‘ಧೂಮ್’ ಸರಣಿಯ ಎಲ್ಲಾ ಚಿತ್ರಗಳು ಬಾಲಿವುಡ್ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆಹೊಡೆದಿವೆ.

ಇದೀಗ ‘ಧೂಮ್-ರೀ ಲೋಡೆಡ್’ ಬಿಡುಗಡೆಗೂ ಮೊದಲೇ ಹೈಪ್ ಕ್ರಿಯೇಟ್ ಮಾಡಿದೆ. ಈ ಹಿಂದಿನ ಮೂರು ಭಾಗಗಳಲ್ಲಿ ನಟಿಸಿದ್ದ ಅಭಿಷೇಕ್ ಬಚ್ಚನ್ ಈ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದು ವಿಶೇಷವೆಂದರೆ ಈ ಚಿತ್ರದಲ್ಲಿ ‘ಬಾಹುಬಲಿ’ ಪ್ರಭಾಸ್ ಕೂಡ ಅಭಿನಯಿಸಲಿದ್ದಾರೆ. ಪ್ರಭಾಸ್ ‘ಬಾಹುಬಲಿ’ಗಾಗಿ ಕಸರತ್ತು ಮಾಡಿ ಉಕ್ಕಿನ ದೇಹ ಮಾಡಿಕೊಂಡಿದ್ದಾರೆ. ಅಲ್ಲದೇ, ಬಾಹುಬಲಿ ಪ್ರಾದೇಶಿಕ ಭಾಷೆಯಲ್ಲಿ ತಯಾರಾದರೂ ವಿಶ್ವದ ಗಮನ ಸೆಳೆದ ಚಿತ್ರವಾಗಿದೆ. ಈ ಚಿತ್ರದ ಮೂಲಕ ಪ್ರಭಾಸ್ ಕೂಡ ಫೇಮಸ್ ಆಗಿದ್ದಾರೆ.

ಹೃತಿಕ್ ರೋಷನ್ ರೀತಿಯಲ್ಲೇ ಪ್ರಭಾಸ್ ಕೂಡ ಕಟ್ಟುಮಸ್ತಾದ ಮೈಕಟ್ಟು ಹೊಂದಿರುವುದರಿಂದ ಅವರನ್ನೇ ಆಯ್ಕೆಮಾಡಲು ಚಿತ್ರತಂಡ ನಿರ್ಧರಿಸಿದ್ದು, ಮಾತುಕತೆ ನಡೆಯುತ್ತಿದೆ. ಪ್ರಭಾಸ್ ‘ಬಾಹುಬಲಿ-2’ನಲ್ಲಿ ಬ್ಯುಸಿಯಾಗಿದ್ದರೆ, ಹೃತಿಕ್ ಕೂಡ ಬೇರೆ ಚಿತ್ರದಲ್ಲಿ ತೊಡಗಿದ್ದಾರೆ. ಇಬ್ಬರ ಚಿತ್ರಗಳು ಪೂರ್ಣಗೊಂಡ ಬಳಿಕ ‘ಧೂಮ್ ರೀ ಲೋಡೆಡ್’ ಆರಂಭವಾಗಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...