alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ಅಭಿಮಾನಿಗಳಿಗೊಂದು ಸಂತಸದ ಸುದ್ದಿ

prabhas_bahubali_part_2-wide

ವಿಶ್ವದ ಗಮನಸೆಳೆದ ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸಿನೆಮಾದಲ್ಲಿ ಅಭಿನಯಿಸುವ ಮೂಲಕ ಸಖತ್ ಫೇಮಸ್ ಆಗಿರುವ ಪ್ರಭಾಸ್ ಸದ್ಯ ‘ಬಾಹುಬಲಿ-2’ನಲ್ಲಿ ಬ್ಯುಸಿಯಾಗಿದ್ದಾರೆ. ‘ಬಾಹುಬಲಿ’ ಚಿತ್ರಕ್ಕಾಗಿ ಅನೇಕ ಚಿತ್ರಗಳನ್ನು ಕೈಬಿಟ್ಟಿದ್ದಾರೆ ಪ್ರಭಾಸ್.

‘ಬಾಹುಬಲಿ’ಯಲ್ಲಿ ಪ್ರಭಾಸ್ ಪಾತ್ರ ಪ್ರೇಕ್ಷಕರ ಮೆಚ್ಚುಗೆ ಮತ್ತು ಗಮನ ಸೆಳೆದಿತ್ತು. ಪ್ರಭಾಸ್ ಕೂಡ ಈ ಪಾತ್ರಕ್ಕಾಗಿ ಭಾರೀ ವರ್ಕೌಟ್ ಮಾಡಿದ್ದರು. ಅನೇಕ ತಿಂಗಳ ಶ್ರಮದ ನಂತರ ‘ಬಾಹುಬಲಿ’ಯಾಗಿ ಮಿಂಚಿದ್ದರು. ಇದೀಗ ಬಂದಿರುವ ಮಾಹಿತಿಯಂತೆ ಪ್ರಭಾಸ್ ಮತ್ತೊಂದು ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಿನೆಮಾದಲ್ಲಿ ನಟಿಸಲಿದ್ದಾರೆ. ಇತ್ತೀಚೆಗೆ ತೆಲುಗಿನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಗಮನಸೆಳೆದ ‘ರುದ್ರಮದೇವಿ’ ಸರಣಿಯ ಮತ್ತೊಂದು ಚಿತ್ರ ತೆರೆಗೆ ತರಲು ನಿರ್ದೇಶಕ ಗುಣಶೇಖರ್ ಪ್ರಯತ್ನ ನಡೆಸಿದ್ದಾರೆ.

ಈ ಚಿತ್ರದಲ್ಲಿ ಕಾಕತೀಯ ವಂಶದ ರಾಜ ‘ಪ್ರತಾಪ ರುದ್ರುಡು’ ಚಿತ್ರಣ ಮೂಡಿಬರಲಿದ್ದು, ಆ ಪಾತ್ರಕ್ಕೆ ಪ್ರಭಾಸ್ ಅವರನ್ನೇ ಆಯ್ಕೆ ಮಾಡಬೇಕೆಂದು ನಿರ್ಧರಿಸಿರುವ ಗುಣಶೇಖರ್ ಸಂಪರ್ಕಿಸಿದಾಗ ಪ್ರಭಾಸ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ‘ಬಾಹುಬಲಿ-2’ ಮುಗಿದ ನಂತರ ಪ್ರಭಾಸ್ ‘ಪ್ರತಾಪ ರುದ್ರುಡು’ ಆಗಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...