alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಲ್ ಚಿತ್ರದ ದಾಖಲೆ ಮುರಿದಿದೆ ಬಾಹುಬಲಿ-2

bhaubali-and-dangal1

ದಾಖಲೆಗಳ ಮೇಲೆ ದಾಖಲೆ ಬರೆದಿರೋ ‘ಬಾಹುಬಲಿ-2’ ಚಿತ್ರದ ಪ್ರಸಾರ ಹಕ್ಕನ್ನು 25.5 ಕೋಟಿ ರೂಪಾಯಿ ಕೊಟ್ಟು ‘ನೆಟ್ ಫ್ಲಿಕ್ಸ್’ ಖರೀದಿ ಮಾಡಿದೆ. ಹಾಗಾಗಿ ಆನ್ ಲೈನ್ ಪೋರ್ಟಲ್ ನಲ್ಲಿ ಈ ಸಿನೆಮಾವನ್ನು 192 ದೇಶಗಳ ಜನರು ವೀಕ್ಷಿಸಬಹುದು.

ಪ್ರಭಾಸ್ ಅಭಿನಯದ ಬಾಹುಬಲಿ-2 ಸಿನೆಮಾ ಇನ್ನೂ ಒಂದು ದಾಖಲೆ ಮಾಡಿದೆ. ನೆಟ್ ಫ್ಲಿಕ್ಸ್ ಬಿಡ್ಡಿಂಗ್ ನಲ್ಲಿ ಅಮೀರ್ ಖಾನ್ ರ ದಂಗಲ್ ಚಿತ್ರವನ್ನು ಹಿಂದಿಕ್ಕಿದೆ. ಯಾಕಂದ್ರೆ ದಂಗಲ್ ಚಿತ್ರದ ಪ್ರಸಾರ ಹಕ್ಕು 20 ಕೋಟಿಗೆ ಮಾರಾಟವಾಗಿತ್ತು.

ಎಪ್ರಿಲ್ 28ರಂದು ಬಿಡುಗಡೆಯಾಗಿದ್ದ ಬಾಹುಬಲಿ-2 ಚಿತ್ರ ಈಗಾಗ್ಲೇ 100 ದಿನ ಪೂರೈಸಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಮೀರ್ ಖಾನ್ ರ ದಂಗಲ್ ಕೂಡ ಕಡಿಮೆಯೇನಿಲ್ಲ. ಚೀನಾದಲ್ಲಿ ಕೂಡ ಸೂಪರ್ ಹಿಟ್ ಆಗಿದೆ. ದಂಗಲ್ ಚಿತ್ರದ ಒಟ್ಟಾರೆ ಕಲೆಕ್ಷನ್ 1864 ಕೋಟಿ ರೂಪಾಯಿ.

ಬಾಹುಬಲಿ-2 ಚಿತ್ರ 1700 ಕೋಟಿ ಕಲೆಕ್ಷನ್ ಮಾಡಿದೆ. ಎರಡೂ ಚಿತ್ರಗಳು ವಿಶಿಷ್ಟ ದಾಖಲೆ ಮಾಡಿವೆ. ಅಭಿಮಾನಿಗಳಿಗೆ ಖುಷಿಯ ವಿಚಾರ ಅಂದ್ರೆ ದಂಗಲ್ ಮತ್ತು ಬಾಹುಬಲಿ-2 ಸಿನೆಮಾಗಳನ್ನು ನೆಟ್ ಫ್ಲಿಕ್ಸ್ ನಲ್ಲಿ ವೀಕ್ಷಿಸಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...