alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ದಿನ 15 ವೆರೈಟಿ ಬಿರಿಯಾನಿ ತಿನ್ನುತ್ತಿದ್ರು ಪ್ರಭಾಸ್!

baahubali-ss-rajamouli

‘ಬಾಹುಬಲಿ’ ಚಿತ್ರದ ಅಭೂತಪೂರ್ವ ಯಶಸ್ಸಿಗೆ ಕಾರಣ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ದೂರದೃಷ್ಟಿ, ನಟ ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿಯ ಶ್ರಮ ಅನ್ನೋದನ್ನು ಎಲ್ರೂ ಒಪ್ಪಿಕೊಳ್ತಾರೆ. ಈ ಚಿತ್ರಕ್ಕಾಗಿ ಪ್ರಭಾಸ್ ಹಾಗೂ ರಾಣಾ ಇಬ್ಬರೂ ಸಾಕಷ್ಟು ಕಸರತ್ತು ಮಾಡಿದ್ದಾರೆ.

ಅಜಾನುಬಾಹುಗಳಾಗಿ ಕಾಣಿಸಿಕೊಳ್ಳಬೇಕಾಗಿದ್ರಿಂದ ಪ್ರಭಾಸ್ ಕೂಡ ಸ್ಟ್ರಿಕ್ಟ್ ಡಯಟ್ ಹಾಗೂ ವರ್ಕೌಟ್ ಮಾಡ್ತಾ ಇದ್ರು. ಸಿಕ್ಕಸಿಕ್ಕದ್ದನ್ನೆಲ್ಲ ತಿನ್ನುವಂತಿರಲಿಲ್ಲ. ಆಯ್ಲಿ ಫುಡ್, ಕರಿದ ತಿಂಡಿಗಳಿಂದ ದೂರವೇ ಇರಬೇಕಿತ್ತು. ಏನಿದ್ರೂ ಹಣ್ಣು, ತರಕಾರಿ, ಮೊಳಕೆ ಕಾಳು ಇಂಥದ್ದೇ.

ಆದ್ರೆ ತಿಂಡಿಪೋತ ಪ್ರಭಾಸ್ ಗೆ ಕಂಟ್ರೋಲ್ ಮಾಡಿಕೊಳ್ಳೋದೇ ಕಷ್ಟವಾಗ್ತಿತ್ತು. ಹಾಗಾಗಿ ತಿಂಗಳಲ್ಲಿ ಒಂದು ದಿನ ಅವರಿಗೆ ಚೀಟ್ ಮೀಲ್ ಡೇ, ಅಂದು ಏನ್ಬೇಕಾದ್ರೂ ತಿನ್ನಬಹುದು. ಆ ದಿನ ಪ್ರಭಾಸ್ 15 ವೆರೈಟಿ ಬಿರಿಯಾನಿಯನ್ನು ತಿನ್ನುತ್ತಿದ್ದರಂತೆ. ಅಷ್ಟೇ ಅಲ್ಲ ಫಿಶ್, ಚಿಕನ್, ಮಟನ್, ಬಗೆ ಬಗೆಯ ಕರಿಗಳು ಒಂದಲ್ಲ ಎರಡಲ್ಲ.

ತಿಂಗಳಲ್ಲಿ ಒಂದು ದಿನ ಇದೇ ರೀತಿ ಪ್ರಭಾಸ್ ಭೂರಿ ಭೋಜನ ಮಾಡ್ತಾ ಇದ್ರು. ತಮ್ಮಿಷ್ಟದ ಮಾಂಸ ಖಾದ್ಯಗಳನ್ನು ಹೊಟ್ಟೆತುಂಬಾ ತಿನ್ನುತ್ತಿದ್ರು ಅಂತಾ ಖುದ್ದು ರಾಜಮೌಳಿ ಬಹಿರಂಗಪಡಿಸಿದ್ದಾರೆ. ಬೆಳಗಿನ ಜಾವ 2 ಗಂಟೆವರೆಗೂ ಫುಟ್ಬಾಲ್ ಆಡಿ, ಚೆನ್ನಾಗಿ ದಣಿದ ಮೇಲೆ ಪ್ರಭಾಸ್ ಬಿರಿಯಾನಿ ಸವಿಯಲು ಕೂತಿದ್ದರಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...